ಗಝಲ್

ಕಾವ್ಯ ಸಂಗಾತಿ

ಗಝಲ್

ಡಾ. ನಾಗರತ್ನಾ ಅಶೋಕ್ ಭಾವಿಕಟ್ಟಿ

ಇಂಚರವು ಇಬ್ಬನಿಯ ಜೊತೆಗೆ
ಇಹಲೋಕದ ಪರಿವಿಲ್ಲದ ಬೆಸುಗೆ
ಇಂಥ ಚಲುವ ರಾಶಿಯ ರತಿಗೆ
ಇನನ ಬೆಳಕ ಕಿರಣದ ಬೆಸುಗೆ

ಮಳೆಬಿಲ್ಲ ಅಂದಕೆ ಬಾಗುವ ಬಾನು
ಭುವಿ ಅಪ್ಪುಗೆಯ ರೋಮಾಂಚನ ಪಡೆಯಿತೇನು
ದಿನವೆಲ್ಲ ಜೊತೆಗಿದ್ದು ದೂರ ಸರಿವ ತವಕಕೆ
ರವಿ ರಜನಿಯ ಒಂದಾಗಿಸುವ ಬೆಸುಗೆ

ಸಂಜೆ ಓಕುಳಿಗೆ ನಾಚಿ ರಂಗೇರಿದೆ ಅಂಬುಧಿ
ಉಕ್ಕಿ ಮೇಲೆದ್ದಿದೆ ಅಲೆಯು
ಚಂದ್ರ ಕಿರಣದ ಅಂದಕೆ
ಬೆಳದಿಂಗಳ ಸ್ಪರ್ಶಕೆ ತಣ್ಣಗಾಗುವ ಬೆಸುಗೆ

ಸಂಜೆ ಮೈ ನೆರೆಯುವ ಹೂ ಮಲ್ಲಿಗೆ
ಹೆದರಿದೆ ಕಾಣುವ ಕಣ್ಣ ದೃಷ್ಟಿಗೆ
ಕಂಪ ಬೀರುತ್ತಿದೆ ಯಾರಿಲ್ಲದ ಸಮಯಕ್ಕೆ
ಶಿವನಿಗೆ ಎಡೆ ಮಾಡುವ ಬೆಸುಗೆ

ಕೆದಿಗೆಯ ವಡೆಯು ಬೀರಿದೆ ಗಂಧ
ಸೆಳೆಯುತ್ತಿದೆ ಸುಗಂಧ ಇಂದ್ರಲೋಕದ ರತಿಗೆ
ಚಲುವಿಕೆಯ ಈ ಪರಿಗೆ ಸೋತಿಹಳು ರತುನ
ಮುದಗೊಂಡಿದೆ ಮನವು ಪ್ರಕೃತಿಯ ಬೆಸುಗೆ


2 thoughts on “ಗಝಲ್

Leave a Reply

Back To Top