ಸಿಂಚನ

ಕಾವ್ಯಸಂಗಾತಿ

ಸಿಂಚನ

ಮಾಜಾನ್ ಮಸ್ಕಿ

ಹೂವೊಂದು ಮುಳ್ಳಾಗಿ
ಚುಚ್ಚಿ
ಹೃದಯ ರಕ್ತ ಸಿಂಚನ
ಮಾಡಿದೆ
ಹೊಂಗನಸಿನಲ್ಲಿ ಅರಳುವ
ಕಂಗಳು
ನಿಸ್ತೆಜಗೊಂಡಿವೆ
ಕಾಮ -ಪ್ರೇಮದ ಮಂಥನದಲ್ಲಿ
ಅಮೃತತ್ವ ಶವ ಮನೆ ಸೇರಿದೆ
ಸೌಂದರ್ಯದ ಕಕ್ಕುಲತೆಯ
ಭಾವನೆ ಬೆತ್ತಲಾಗಿ
ಬಿತ್ತಿ ಚಿತ್ರ ಗೋಡೆಗೆ
ಅಂಟಿದೆ
ಸುಹಾಸನೆ ಕಳೆದುಕೊಂಡ
ಪ್ರೀತಿ
ಕೃತಕದಲ್ಲಿ ನಗುತ್ತಿದೆ
ತ್ಯಾಗ ತುಂಬಿದ ಪ್ರೀತಿ
ಬೆಳಕಿನಲ್ಲಿ ಬೆಳಕು
ಹಿಡಿದು
ಹುಡುಕಬೇಕಿದೆ
ಪ್ರೀತಿಯನ್ನು ಪ್ರೀತಿಯಿಂದ
ಪ್ರೀತಿಸುವುದನ್ನು
ಕಲಿಯಬೇಕಿದೆ……


Leave a Reply

Back To Top