ಹೇಗೆ ಹೇಳಲಿ?

ಕಾವ್ಯ ಸಂಗಾತಿ

ಹೇಗೆ ಹೇಳಲಿ?

ಡಾ. ನಾಗರತ್ನಾ ಅಶೋಕ್ ಭಾವಿಕಟ್ಟಿ

ನನ್ನರಿಕೆಯ ಕನಸ ಕೈಗೂಡಿಸಿ
ನನಸ್ಸಾಗಿಸಲಿಲ್ಲ ಗೆಳೆಯಾ
ಮನಸು ಅರಿತು ಹಗುರಾಗಿಸಿ
ಮುದಗೊಳಿಸಲಿಲ್ಲ ಗೆಳೆಯಾ

ನನ್ನಾಸೆ ಕೋರಿಕೆ
ತೆರೆದಿಟ್ಟರು ತಿಳಿಯದೆ
ಕರಗದೆ ನಿನ್ನ ಹಠವೇ
ನಿನಗಾಯಿತಲ್ಲ ಗೆಳೆಯಾ

ಹಗಲು ಇರುಳೆನ್ನದೆ ನೆನೆದು
ಸ್ವರ್ಗ ತೋಷವ ಕಂಡು
ಶರ ವೇಗದಲ್ಲಿ ಬಂದು
ಕೈಸಿಗದೆ ಹೋದೆಯಲ್ಲ ಗೆಳೆಯ

ಸಿಗದಿರೆ ನನೆಯುತಿರಲಿಲ್ಲ
ಮನಕೆ ಹಚ್ಚಿ ಹುಚ್ಚು ಹಿಡಿಸಿ
ಮಾತಲ್ಲೇ ನೂರು ಆಸೆ ಹೆಚ್ಚಿಸಿ
ಮೌನವಾದೆಯಲ್ಲ ಗೆಳೆಯ

ವರ್ಷದಲೆ ಮರೆಯದ ಹರ್ಷ ಕೊಟ್ಟು
ಸಲಿಗೆಯಲಿ ಸನಿಹಕೆ ಬಂದು
ನೋಡು ನೋಡುತ್ತಲೇ
ಕಾಣದಾದೆಯಲ್ಲ ಗೆಳೆಯ

ಹೇಗೆ ಹೇಳಲಿ ಮನದಿಂಗಿತವ
ತಿಳಿಯದಾಗಿದೆ ರತುನಳಿಗೆ
ನಿನ್ನ ಹುಚ್ಚು ಬಿಟ್ಟು ಹೋಗದು
ನಿಶ್ಚಿಂತದಲಿ ಇರಗೊಡದಾದೆಯಲ್ಲ ಗೆಳೆಯ


3 thoughts on “ಹೇಗೆ ಹೇಳಲಿ?

Leave a Reply

Back To Top