ಅಮ್ಮಂದಿರ ದಿನದ ವಿಶೇಷ

ಲೇಖನ

ಅಮ್ಮಂದಿರ ದಿನದ ವಿಶೇಷ

ಅಮ್ಮನ ಮಡಿಲು ವಾತ್ಸಲ್ಯದ ಕಡಲು

ಅನುಸೂಯ ಯತೀಶ್.

 ಈ ಜಗತ್ತಿನ ಅದ್ಭುತ ಸೃಷ್ಟಿಗಳಲ್ಲಿ ಒಂದು ಅಮ್ಮ . ಅದು ಬೆಲೆಕಟ್ಟಲಾರದ ಅಮೂಲ್ಯ ಆಸ್ತಿ. ಮಮತೆಯ ಮಡಿಲು. ಪ್ರೀತಿಯ ಸಕಾರಮೂರ್ತಿ.ತ್ಯಾಗದ ಪ್ರತೀಕ.ಅಮ್ಮನ ಪ್ರೀತಿಗೆ ಕೊನೆಯೆಂಬುದು ಇಲ್ಲ.ಅದು ಸಮುದ್ರದಂತೆ ಆಳ,ಆಗಸದಂತೆ ವಿಶಾಲವಾದುದು.

ಅಮ್ಮನದು ಕಪಟವಿರದ,ಸ್ವಾರ್ಥವಿಲ್ಲದ,ನಿಷ್ಕ್ಮಶ ಪ್ರೇಮ.

ಅವಳ ಅಕ್ಕರೆ ಅನನ್ಯ.ತನ್ನ ಕರುಳ ಕುಡಿಗಾಗಿ ಬಾಳ ತೇಯ್ವಾ ಶ್ರೀಗಂಧ. ಅಮ್ಮ ಕೇವಲ ತಾಯಿ ಮಾತ್ರವಲ್ಲ ಗುರು,ಮಾರ್ಗದರ್ಶಿ,

ನಮ್ಮ ಬದುಕಿನ ಜೀವಚೈತನ್ಯ.ತನ್ನೆಲ್ಲಾ ನೋವುಗಳನ್ನು ತುಟಿಕಚ್ಚಿ ಬಿಗಿದಪ್ಪಿ ತನ್ನ ಕರುಳ ಕುಡಿಗಳಿಗೆ ಜೀವತುಂಬಿ ಭಾವತುಂಬಿ ಅವರನ್ನು ಉತ್ತಂಗ ಶಿಖರಕ್ಕೆ ಏರಿಸುವ ಕಣ್ಣ ಎದುರಿಗೆ ಇರುವ ಪ್ರತ್ಯಕ್ಷ ದೈವ ಎಂದರೆ ಅದು ಅಮ್ಮ ಮಾತ್ರ.ಅಮ್ಮನ ಪ್ರೀತಿ ಅಳೆಯಲು ಯಾವ ಸಾಧನಗಳು ಇಲ್ಲಾ.ನಮಗೆ ಬದುಕನ್ನು ಸಮಚಿತ್ತದಿಂದ ಎದುರಿಸುವ ಕಲೆಯನ್ನು ಕಲಿಸಿದವಳು ಅಮ್ಮ.ನಾವು ಸೋತಾಗ ಮೇಲೆತ್ತಿ ಗೆಲುವಿನ ದಾರಿಐ ತೋರಿದವಳು ಅಮ್ಮ.

ಅಮ್ಮನ ಬಗ್ಗೆ ವರ್ಣಿಸಲು ಭಾಷೆಗೆ ಬಡತನ ಕಾಡುತ್ತದೆ. ಎಂತಹ ಪದ ಬಳಸಿ ವರ್ಣಿಸಲು ಹೋದರು ಅವೆಲ್ಲವೂ ಅವಳ ಮುಂದೆ ಸೋತು ಬಿಡುತ್ತವೆ .ಕಾರಣ ಅಷ್ಟು ಅದ್ಭುತವಾದ ಅಮೋಘವಾದಂತಹ ಮಹೋನ್ನತ ವ್ಯಕ್ತಿತ್ವ ಅಮ್ಮನದು. ತಾಯಿಯೆಂಬ ಶಿಲ್ಪಿಗೆ ಆಕಾರವಿಲ್ಲದ ಕಲ್ಲನ್ನು ಸಂಸ್ಕಾರದಲ್ಲಿ ಪೆಟ್ಟಿನಿಂದ ಪೂಜನೀಯ ಮೂರ್ತಿಯನ್ನಾಗಿ ಸುವ ತಾಕತ್ತಿದೆ .ಇಂದು ಜಗತ್ತಿನಲ್ಲಿ ಸಾಧನೆ ಮಾಡಿರುವವರು ಸಾವಿರಾರು ಇರಬಹುದು ಅದರಲ್ಲಿ ಅಮ್ಮನ ಬೆಂಬಲವಿಲ್ಲದೆ ಸಾಧನೆ ಮಾಡಿರುವವರು ಹಲವರು ಮಾತ್ರ. ಹಾಗಾಗಿ ಪ್ರತಿಯೊಂದು ಸಾಧನೆಯ ಹಿಂದೆ ಅಮ್ಮನ ಒಲುಮೆಯ  ಬೆಂಬಲವಿರುತ್ತದೆ. ಸ್ಪೂರ್ತಿ ಇರುತ್ತದೆ.

 ಅಮ್ಮನ ಶಕ್ತಿ ಎಷ್ಟಿದೆ ಎಂದರೆ ಗುರುವಿನ ಬಳಿ ವಿದ್ಯೆ ಕಲಿಸಲು ಅಮ್ಮ ಕರೆದುಕೊಂಡು ಹೋಗುತ್ತಾಳೆ ಆದರೆ ಆ ಮಗನ ವಿದ್ಯಾರೇಖೆ ಗಮನಿಸಿದ ಗುರುಗಳು ಅವನ ಕೈಗಳಲ್ಲಿ ವಿದ್ಯಾರೇಖೆ ಇಲ್ಲದವನಿಗೆ ಕಲಿಸಲು ಸಾಧ್ಯವಿಲ್ಲ ಎನ್ನುತ್ತಾರೆ. ಆಗ ಅಮ್ಮನ ಬಾಡಿದ ಮುಖವನ್ನು ನೋಡಿದ ಮಗನ ಕಲ್ಲನ್ನು ತೆಗೆದುಕೊಂಡು ತನ್ನ ಅಂಗೈಯಲ್ಲಿ ವಿದ್ಯಾರೇಖೆ  ಕೆತ್ತಿಕೊಂಡು ಹೋಗಿ ಗುರುವಿಗೆ ತೋರಿಸಿದಾಗ ಇವನ ಕಲಿಯುವ ಆಸಕ್ತಿಯನ್ನು ಕಂಡ ಗುರುಗಳು ಇವನನ್ನ ಮನಪೂರ್ವಕವಾಗಿ ಶಿಷ್ಯನನ್ನಾಗಿ ಮಾಡಿಕೊಂಡು ವಿದ್ಯೆ ಕಲಿಸುತ್ತಾರೆ. ಅವನೇ ಪಾಣಿನಿ . ಮುಂದೆ ವ್ಯಾಕರಣಶಾಸ್ತ್ರ ಎಂಬ ಜಗತ್ಪ್ರಸಿದ್ಧ ಕೃತಿಯ ಕರ್ತೃ ಆಗುತ್ತಾನೆ .ಇದರ ಹಿಂದಿದ್ದ ಶಕ್ತಿ ಯಾರು ಅಂದುಕೊಂಡಿರಿ ಅದು ತಾಯಿಯ ಆಸೆ ಅವಳ ಬರವಸೆ ಕನಸು .

ಹಾಗೆಯೇ ಮೊಘಲರ ವಶದಲ್ಲಿದ್ದ ಕೊಂಡಮದುರ್ಗವನ್ನು ಮರಾಠರಿಂದ ಗೆದ್ದು ತನಗೆ ಬಳುವಳಿಯಾಗಿ ಕೊಡಬೇಕು ಎಂದು ತಾಯಿ ಹೇಳಿದ ಮಾತಿಗೆ ಪ್ರತಿಯಾಗಿ ಶಿವಾಜಿ ಮೊಗಲರನ್ನು ಸೋಲಿಸಿ ವಿಶಾಲ ಮರಾಠ ಸಾಮ್ರಾಜ್ಯವನ್ನು ಕಟ್ಟಿ ತಾಯಿಗೆ  ಬಳುವಳಿಯಾಗಿ ಕೊಟ್ಟರು .ಇದರ ಹಿಂದಿದ್ದು ಕೂಡ ತಾಯಿಯ ಪ್ರೇರಕಶಕ್ತಿ ಎಂಬುದನ್ನು ನಾವು ಮರೆಯುವಂತಿಲ್ಲ .

ಥಾಮಸ್ ಅಲ್ವಾ ಎಡಿಸನ್ ಒಬ್ಬ ಶತದಡ್ಡ ಇವನು ಕಲಿಯಲು ಅರ್ಹನಲ್ಲ ಎಂದು ಶಾಲೆಯಿಂದ ಹೊರ ಹಾಕಿದ ಮಗನಿಗೆ ತಾಯಿ ಮನೆಯಲ್ಲಿಯೇ ವಿದ್ಯೆ ಬುದ್ಧಿ ಕಲಿಸಿ ಅಂಧಕಾರದಲ್ಲಿ ಮುಳುಗಿದ್ದ ಇಡೀ ಜಗತ್ತಿಗೆ ಬೆಳಕನ್ನು ನೀಡುವಂತಹ ಜ್ಯೋತಿಯನ್ನಾಗಿ ತನ್ನ ಮಗನನ್ನು ನಿರ್ಮಿಸಿದ ಕೀರ್ತಿ ಅವರ ಮಾತೆಗೆ ಸಲ್ಲುತ್ತದೆ .

ಸ್ನೇಹಿತರೆ ಈ ಎಲ್ಲ ನಿದರ್ಶನಗಳು ನಮಗೆ ಅಮ್ಮನ ಒಂದು ಅದ್ಭುತ ಶಕ್ತಿಯ ಪ್ರೇರಕ ಭಾವವನ್ನು ನಮಗೆ ಪರಿಚಯಿಸುತ್ತವೆ . ಅಮ್ಮ ಎಂದರೆ ಭೂಮಿಯ ಮೇಲೆ ಇರುವ ನೈಜ ದೈವ .

 ಜಗಮೆಚ್ಚಿದ ಸಂತನಾದ “ಸ್ವಾಮಿ ವಿವೇಕಾನಂದರು” ತಾಯಿಯ ಬಗ್ಗೆ ತಮ್ಮ ಮನದಾಳದ ಮಾತನ್ನು ಹೇಗೆ ವ್ಯಕ್ತಪಡಿಸಿದ್ದಾರೆ “ಈಗ ನಾನು ಏನಾಗಿದ್ದೇನೋ ಅದಕ್ಕೆ ಕಾರಣ ನಮ್ಮಮ್ಮ. ನಾನು ಇದ್ದೇನೆ . ಆದರೂ ಆಕೆಯ ಋಣವನ್ನು ತೀರಿಸುವುದು ಕಂತು ಸಾಧ್ಯವಿಲ್ಲ “.

ರೆವೇಮೆಂಟ್ ಚಿತ್ರದ ಅಭಿನಯಕ್ಕಾಗಿ “ಆಸ್ಕರ್ ಪ್ರಶಸ್ತಿ” ಪಡೆದುಕೊಂಡ “ಲಿಯೋನಾರ್ಡ್ ಡಿ ಕ್ಯಾಪ್ರಿಯೋ “ತಮ್ಮೆಲ್ಲ ಸಾಧನೆಯ ಸ್ಫೂರ್ತಿ  ಅಮ್ಮ  ಎನ್ನುತ್ತಾರೆ” ನಮ್ಮಮ್ಮ. ನನ್ನ ಬದುಕಿನ ನಡೆದಾಡುವ ದೇವರು ಎಂದು ಹೆಮ್ಮೆಯಿಂದ ಕಣ್ತುಂಬಿಸಿಕೊಂಡು ಹೇಳುವ ಅವರ ಧ್ವನಿಯಲ್ಲಿ ಅಮ್ಮನ ಕುರಿತ ವ್ಯಕ್ತ ಪ್ರೀತಿಯ ಮಹಾಪೂರವೇ ಹರಿದಿದೆ “

“ನನಗೆ ನಮ್ಮಮ್ಮನ ಪ್ರಾರ್ಥನೆಗಳು ಇಂದಿಗೂ ನೆನಪಿನಲ್ಲಿವೆ. ಅವು ಯಾವತ್ತೂ ನನ್ನನ್ನು ಅನುಸರಿಸುತ್ತಿದ್ದವು. ನನ್ನ ಜೀವನದುದ್ದಕ್ಕೂ ನನ್ನನ್ನು ಗಟ್ಟಿಯಾಗಿ ಹಿಡಿದಿಟ್ಟಿದ್ದು ಅಮ್ಮನ ಪ್ರಾರ್ಥನೆಗಳು ಎಂದು ಸರಕಾರವನ್ನು ನೆನಪಿಸಿಕೊಳ್ಳುತ್ತಿದ್ದರು ಅಮೇರಿಕದ ಅಧ್ಯಕ್ಷ ಅಬ್ರಹಾಂ ಲಿಂಕನ್ “

” ತಾಯಿ ಖುಷಿಯಾಗಿದ್ದರೆ ಕುಟುಂಬ ಖುಷಿಯಾಗಿರುತ್ತದೆ .

 ಕುಟುಂಬ ಖುಷಿಯಾಗಿದ್ದರೆ ದೇಶ ಖುಷಿಯಾಗಿರುತ್ತದೆ . ಅಂದರೆ ಇಡೀ ದೇಶದ ಮೇಲೆ ನಿಂತಿದೆ ಎಂಬ ಭಾರತದ ಹೆಮ್ಮೆಯ ರಾಷ್ಟ್ರಪತಿಯಾಗಿದ್ದ ಎಪಿಜೆ ಅಬ್ದುಲ್ ಕಲಾಂ ವಾಣಿ ಇಂಧನವು ತಾಯಿಯ ಮಹಿಮೆ ಅರಿಯಬಹುದು

ಅಮ್ಮ ಎಂದ ಕೂಡಲೇ ಮೈಯಿ ರೋಮಾಂಚನಗೊಳ್ಳುತ್ತದೆ .ಮನಸ್ಸು ಪ್ರಫುಲ್ಲ ಗೊಳ್ಳುತ್ತದೆ . ಕನಸುಗಳು ರೆಕ್ಕೆಬಿಚ್ಚಿ ಬಾನಲ್ಲಿ ಸ್ವಚ್ಛಂದವಾಗಿ ಹಾರುತ್ತವೆ .ಅಮ್ಮ ಎಂಬ ಎರಡೂವರೆ ಅಕ್ಷರದ ಈ ಪದದ ಶಕ್ತಿಯೇ ಅಂತದ್ದು ಈಗ ನಾವು ಏನಾಗಿದ್ದೇವೋ ಅದರ ಜೀವಸೆಲೆ ಅಮ್ಮನಿಂದ ಬಂದಿದ್ದು . ಸಾಮಾನ್ಯವಾಗಿ ಅಮ್ಮನನ್ನು ದೇವರಿಗೆ ಹೋಲಿಸುತ್ತೇವೆ. ಆದರೆ ದೇವರನ್ನು ಮೀರಿದ ಅದ್ಭುತಶಕ್ತಿ ಅಮ್ಮ ಎಂಬುದನ್ನು ನಾವು ಮರೆಯಬಾರದು. ಏಕೆಂದರೆ ನಮಗೆ ಬೇಕಾದಾಗ ನಮ್ಮ ನೋವಿನಲ್ಲಿ ಪ್ರೀತಿಯ ಸಿಂಚನವನ್ನು ಹಚ್ಚುವಳು, ನಾವು ಕಷ್ಟದಲ್ಲಿದ್ದಾಗ ಭರವಸೆಯ ಬೆಂಗಾವಲಾಗಿ ಇರುವವಳು, ನಾವು ಎಡವಿದಾಗ ನಮ್ಮನ್ನು ಸರಿದಾರಿಯಲ್ಲಿ ನಡೆಸುವವಳು, ಸೋತಾಗ ಮತ್ತೆ ಗೆಲ್ಲಲು ಸ್ಪೂರ್ತಿ ತುಂಬುವವರು , ತನ್ನೆಲ್ಲ ನೋವುಗಳನ್ನು ಸೆರಗಿನಲ್ಲಿ ಬಚ್ಚಿಟ್ಟುಕೊಂಡು ಮಕ್ಕಳಿಗೆ ಪ್ರೀತಿಯ ಸಿಂಚನಗೈಯುವವಳು ಅಮ್ಮನೇ ಆಗಿದ್ದಾಳೆ.

 ತಾಯಿಯೆಂಬ ಶಕ್ತಿ ಸದಾಕಾಲ ಮಕ್ಕಳಿಗಾಗಿ ಮಿಡಿಯುವ ಹೃದಯ. ಒಬ್ಬ ತಾಯಿ ಹತ್ತು ಮಕ್ಕಳನ್ನು ಹಾಕಬಲ್ಲಳು.ಆದರೆ ಹತ್ತು ಮಕ್ಕಳು ಒಬ್ಬ ತಾಯಿಯನ್ನು ಸಾಕಲಾರರು ಆದರೂ ಕೂಡ ತಾಯಿ ಮಕ್ಕಳಿಂದ ಪರಿತ್ಯಕ್ತಳಾಗಿ ವೃದ್ಧಾಶ್ರಮದ ಮೂಲೆಯೊಂದರಲ್ಲಿ ಕುಳಿತಿದ್ದರು ಕೂಡ ತನ್ನ ಮಕ್ಕಳಿಗಾಗಿ ತಾನು ಮಾಡಿದ ತ್ಯಾಗ, ತೋರಿದ ಪ್ರೀತಿಯನ್ನು ನೆನೆದು, ಕಣ್ಣಲ್ಲಿ ಹನಿ ಜರುಗುತ್ತಿದ್ದರೂ ಸಹ ದೂರದಿಂದಲೇ ಇದ್ದು, ತನ್ನ ಮಕ್ಕಳನ್ನು  ಹಾರೈಸುತ್ತಾ ಅವರ ಗೆಲುವನ್ನು ,ಅವರ ಸಂತೋಷವನ್ನು ಕಂಡು  ನಗೆ ಬೀರುತ್ತ ಅವರ ಭವಿಷ್ಯ ಚೆನ್ನಾಗಿರಲಿ ಐಎಂದು ಕೈಯೆತ್ತಿ ಹಾರೈಸುವ ಭೂಮಿಯ ಮೇಲೆ ಇರುವ ನಿಜವಾದ ದೈವತ್ವದ ಸಾಕಾರಮೂರ್ತಿ ತಾಯಿ .

 ನವಮಾಸ ತಂದ ಒಡಲೊಳು ಬೆಸೆದುಕೊಂಡ ಕರುಗಳಿಗೆ ಜನ್ಮ ನೀಡಿ ಜಗತ್ತಿಗೆ ತಂದು

 ಎದೆಹಾಲುಣಿಸಿ ಪ್ರೀತಿಯ ತುತ್ತು ತಿನ್ನಿಸಿ ಲಾಲಿಹಾಡಿ ಕುಟುಂಬದಲ್ಲಿ ನಂದಿ ನಿನ್ನ ಪಾತ್ರಗಳನ್ನು ನಿರ್ವಹಿಸುವ ಸಹನಾಮೂರ್ತಿ .

ಸಕಲ ಕಷ್ಟದ ಜ್ವಾಲಾಮುಖಿಯನ್ನು ಮನದೊಳಗೆ ಅನುಭವಿಸಿ ಸುಟ್ಟು ಕರಕಲಾಗಿ ಭಾವಗಳನ್ನು ಸೆರಗಿನೊಳಗೆ ಮರೆಮಾಚಿ ,ಪ್ರೇಮ ಸುಧೆಯನ್ನು ಹರಿಸುತ್ತಾ, ತಲೆ ತಲೆಮಾರುಗಳಿಂದ ಬಂದ ಕಟ್ಟುಕಟ್ಟಳೆಗಳ ಬಂದಿಯಾಗಿ ರೂಢಿಗತ ನಿಯಮದ ಶೋಷಣೆಯ ಬಲಿಪಶುವಾಗಿ ನಿಂದನೆಯ ಮಾತುಗಳನ್ನು ಕೇಳುತ್ತಿದ್ದರೂ ಕೂಡ ಇವ್ಯಾವಕೂ ಹೆದರದೆ ಅಚಲವಾಗಿ ಮುಂದೆ ಸಾಗುತ್ತ ದಿಟ್ಟ ಹೆಜ್ಜೆ ಇಟ್ಟು ಹೆಣ್ಣು ಅಬಲೆಯಲ್ಲ ಸಬಲೆ ಎಂದು ಜಗಕೆ ಸಾರಿ ಹೇಳಿದ ವೀರ ವೀರಾಗ್ರಣಿ ನನ್ನ ಮಾತೆ.

ನಾನು ಅಮ್ಮನಾಗಿ ಮಾತನ್ನು ಸದಾ ನೆನಪಿಸಿಕೊಳ್ಳಲು ಇಷ್ಟಪಡುತ್ತೇನೆ .ನೀನು ಆಕಾಶವನ್ನು ಏರುವ ಗುರಿಯನ್ನು ಇಟ್ಟು ಕೊಂಡರೆ ಕನಿಷ್ಠ ಪಕ್ಷ ಮನೆಯ ಛಾವಣಿಯ ಯಲ್ಲಾದರೂ ಏರುತ್ತೀಯ ಎಂಬ ಭರವಸೆಗಳನ್ನು ಇಟ್ಟುಕೋ ಗುರಿಗಳನ್ನು ನಿಗದಿಪಡಿಸಿಕೊಂಡು ಅವುಗಳನ್ನು ನೆರವೇರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡು ಪ್ರತಿಫಲ ಪ್ರತಿಫಲಾಪೇಕ್ಷೆ ಗಳನ್ನು ಮೊದಲೇ ಚಿಂತಿಸಬೇಡ ಎಂದು ಸಾಕಿದವಳು ತಾಯಿ.

 ” ಹತ್ತು ಮಕ್ಕಳ ಹೆತ್ತು  ಸಾಕಿದರು

ಮುತ್ತಿಕ್ಕಿ ಮಮತೆಯಲ್ಲಿ ಅಕ್ಕರೆಯ ಹಂಚಿದರು ಮುಪ್ಪಿನಲ್ಲಿ ಹೆತ್ತಮಕ್ಕಳ  ಲೆಕ್ಕಕ್ಕಿಲ್ಲ” ಅಂತಹ ಅದ್ಭುತ ಶಕ್ತಿ ಅಮ್ಮ.

ನಾನು ನನ್ನ  ಅಮ್ಮನ ತ್ಯಾಗದ ಬಗ್ಗೆ ಹೇಳಲು ಪದಗಳೇ ಸಾಲದು .ಅಂತಹ ಮಾತೆ ನನ್ನ ಅಮ್ಮ.

ಯಾರ ಮುಂದೆಯೂ ಅವರ ಶ್ರೀಮಂತಿಕೆಗೆ ದರ್ಪದ ಮಾತುಗಳಿಗೆ ತಲೆಬಾಗಬೇಡ . ನ್ಯಾಯ ನೀತಿಗೆ ತಲೆಬಾಗು . ಮನುಷ್ಯನ ಮಾನವೀಯತೆಗೆ ಬೆಲೆಕೊಡು ಅವನ ದುಷ್ಟ ಕಾರ್ಯಗಳನ್ನು ಸಹಿಸಬೇಡ ಸಮಾಜಮುಖಿಯಾಗಿ ಸಮಾಜದಲ್ಲಿ ತಲೆ ಎತ್ತಿ ನಡೆಯುವ ವ್ಯಕ್ತಿತ್ವ ರೂಪಿಸಿಕೊ ಸ್ವಾಭಿಮಾನದ ಬದುಕು ನಿನ್ನದಾಗಿರಲಿ ಎಂದು ಹರಸಿ ಅದರಂತೆ ಬೆಳೆಸಿದರು .ವಿದ್ಯಾ ಬುದ್ಧಿ ಕಲಿಸಿದರು.

ನನಗೆ ತಿಳಿದ ಮಟ್ಟಿಗೆ ನಾನು ಎಂದು ನನ್ನ ಅಮ್ಮನ ಮನ ನೋಯಿಸಿಲ್ಲಾ .

ಅವರ ಜೊತೆ ಕಳೆದ ಪ್ರತಿಕ್ಷಣ ಆನಂದಮಯ . ಎಂತಹ ಕಷ್ಟದ ಪರಿಸ್ಥಿತಿಯಲ್ಲಿಯೂ ನಮಗೆ ಅದರ ಛಾಯೆ ಆವರಿಸದಂತೆ ಜಾಗ್ರತೆ ವಹಿಸಿದರು. ಜೀವನದಲ್ಲಿ ಸ್ಪೂರ್ತಿ ತುಂಬಿ ಹುರಿದುಂಬಿಸಿ ಓದಲು ಪ್ರೋತ್ಸಾಹ ನೀಡಿದರು . ಅದರ ಪ್ರತೀಕವೆ ನಾನು ಇಂದು ನೂರಾರು ಮಕ್ಕಳಿಗೆ ವಿದ್ಯೆ ಕಲಿಸುವಂತಹ ಶಿಕ್ಷಕ ವೃತ್ತಿಗೆ ಸೇರಿ ಕಾರ್ಯ ನಿರ್ವಹಿಸುತಿರುವೆ .

ಒಟ್ಟಾರೆ ಹೇಳುವುದಾದರೆ ತಾಯಿಯ ಋಣವನ್ನು ತೀರಿಸಲು ಏಳೇಳೂ ಜನ್ಮಕೂ ಆಗೋದು. ಅಂತಹ ಅಮ್ಮ ನಿನಗೆ ಕೋಟಿ ಕೋಟಿ ವಂದನೆ .


ಅನುಸೂಯ ಯತೀಶ್.

Leave a Reply

Back To Top