ಕಾವ್ಯ ಸಂಗಾತಿ
ಅಮ್ಮಂದಿರ ದಿನದ ವಿಶೇಷ
ತಾಯಿ ಮತ್ತು ಸಮಾಜ
ಡಾ. ಕೆ. ಬಿ. ಸೂರ್ಯ ಕುಮಾರ್
ತಾಯಿ ಎಂಬುದು ಒಂದು ತುಂಬಿದ ಕೊಡ… ತನಗಾಗಿ ಎಂದೂ ಏನನ್ನು ಬಯಸದವಳು.
ತನ್ನ ಕಂದನ ಸುಖವೇ ತನ್ನ ಸುಖಗಳು,
ತನಗದು ಇಲ್ಲೆಂದು ಕೊರಗದವಳು…
ಅಂಬೆಗಾಲಿನ ಪುಟ್ಟ ಹೆಜ್ಜೆಯನಿಟ್ಟು,
ಬಿದ್ದಾಗ ನಿನ್ನನ್ನು ಎತ್ತಿದವಳು….
ಕಳ್ಳರಿಗೂ, ಸುಳ್ಳರಿಗೂ, ನಮ್ಮೆಲ್ಲರಿಗೂ.
ಅವಳು ಎಂದೆಂದಿಗೂ ತಾಯಿ,
ಜೀವನದಿ ಸೋತಾಗ ದೈರ್ಯ ತುಂಬಿದ ಆಕೆ,
ನೀನು ತಪ್ಪಿದಾಗ, ಸಮಾಜದ ಕಾಕ ದೃಷ್ಟಿಗೆ ಬಿದ್ದವಳು…
ನೀನೆಂದು ಸೋತರೂ , ಜೈಲು ಸೇರಿದರೂ
ಅವಳದು ಮಾತ್ರಾ ಕಣ್ಣೀರ ದಾರೆ,
ಸಮಾಜದ ಕಣ್ಣಲ್ಲಿ, ಕೆಲವೊಮ್ಮೆ ಅವಳೊಂದು ಕೆಟ್ಟ ನೀರೆ.
ತನ್ನ ಮಗುವಿನ ಸಂತೃಪ್ತಿಯಲ್ಲಿ ಸುಖ ಕಂಡ, ಆಕೆ,
ಸಮಾಜದ ಕೊಂಕು ನುಡಿಗೆ ಆಗ ಕೊಳೆತ ಕಾಂಡ…
ಸಮಾಜವೇನೂ, ಲೋಕವೇ ತಿರುಗಿ ಬಿದ್ದರೂ ಕೂಡಾ,
ತನ್ನ ಮಗುವನ್ನು ಎಂದೂ ಬಿಟ್ಟುಕೊಡದ , ತುಂಬಿದಾ ಕೊಡ……
Beautiful poem
Thank you
buityfull ಅಮ್ಮ ಅಮ್ಮನೇ…
ಮಾತೃ ದೇವೋಭವ ತಾಯಿ ಬಗ್ಗೆ ಬಹಳ ಸೊಗಸಾದ ಬರಹ , ಧನ್ಯವಾದಗಳು
ಶೋಭಾ…ಧನ್ಯವಾದಗಳು.
A very poignant tribute to a mother
Vijaya… Thank you so much
Thanks for the beautiful tribute to our mothers.
मातृ देवो भव:
Thank You Govind
Bahala chennagide
Very beautiful.
Dr. V.K chengappa.
Very beautiful.
Dear bhava your assessment on mother’s love and affection on children amazing
God bless you and your family
Very nice poem Dr.