ಕಾವ್ಯಸಂಗಾತಿ
ಅಮ್ಮಂದಿರ ದಿನದ ವಿಶೇಷ
ಅಮ್ಮನಿಗಾಗಿಷ್ಟು ಹಾಯ್ಕುಗಳು
ಎ. ಹೇಮಗಂಗಾ
- ಪ್ರೀತಿ, ವಾತ್ಸಲ್ಯ
ತುಂಬಿದ ಗಣಿ ತಾಯಿ
ಮತ್ತೊಬ್ಬರಿಲ್ಲ - ಸರಿಸಮವೇ
ಭೂಮಿ, ತಾಯಿ ಇಬ್ಬರೂ
ಸಹನೆಯಲ್ಲಿ - ಬದುಕಿದ್ದಾಗ
ತಾಯಿಯ ಬೆಲೆ ಮಗ
ಅರಿಯಲಿಲ್ಲ - ನಿತ್ಯ ಕಾಡಿದ
ಮಗ ಚಿತೆಯೆದುರು
ರೋದಿಸುತ್ತಿದ್ದ - ತಾಯ ಮೊಗದಿ
ನಗೆ ಬುಗ್ಗೆ ; ಮನದಿ
ನೋವಿನ ಊಟೆ - ಕಣ್ಣೀರೊರೆಸಿ
ಅಪ್ಪಿದ ಮಗಳಲ್ಲಿ
ತಾಯಿ ಕಂಡಳು - ಮಗ ದುರುಳ
ಹೆತ್ತವಳ ಕಣ್ಣೀರೇ
ಶಾಪವಾಯಿತು - ಒಳ್ಳೆಯ ನಟಿ
ತಾಯಿ, ದುಃಖವನ್ನೆಲ್ಲಾ
ಬಚ್ಚಿಡುವಳು - ನೋಯಿಸಿದರೂ
ಹೆತ್ತ ಮಕ್ಕಳ ಕಾಯ್ವ
ದೇವತೆ ತಾಯಿ - ನೊಂದ ಮನಕೆ
ತಾಯಿಯ ಸಾಂತ್ವನದ
ಲಾಲಿಯೇ ಬೇಕು - ಗಂಧದಂತೆಯೇ
ತಾಯಿಯು, ತೇಯುವಳು
ತನ್ನ ಜೀವವ - ಹೊತ್ತರೂ ನೂರು
ನೋವಿನ ಭಾರ ತಾಯಿ
ಕುಗ್ಗುವುದಿಲ್