ಕಾವ್ಯಸಂಗಾತಿ
ಅಮ್ಮಂದಿರ ದಿನದ ವಿಶೇಷ
ಅಮ್ಮಂದಿರ ದಿನವಂತೆ
ಲೋಕೇಶ ಬೆಕ್ಕಳಲೆ
ಇವತ್ತು ಅಮ್ಮಂದಿರ ದಿನವಂತೆ
ಅದರಿಂದಾಗಿ ಟ್ರಂಕಿನೊಳಗೆ ಅವಿತು
ಕುಳಿತ್ತಿದ್ದ, ಗಟ್ಟುಮೊಟೆಕಟ್ಟಿ ಎತ್ತಿಟ್ಟದ
ಅಮ್ಮಂದಿರ ಫೋಟೋಗಳದ್ದೆ ಕಾರಬಾರು
ಡಿಪಿ, ಸ್ಟೇಟಸ್,
ವಾಟ್ಸಾಪಿನಲ್ಲಿರುವ ಅಮ್ಮ
ಮನೆ(ನ)ಯಲ್ಲಿಲ್ಲ
ಫೇಸ್ಬುಕ್ ನಲ್ಲಿ ಉಕ್ಕುವ
ಮಾತೃ ಪ್ರೀತಿ
ಮೊಗದಲ್ಲಿಲ್ಲ, ಎದೆಯಲ್ಲಿಲ್ಲ
ಅಲ್ಲಿರುವುದೊಂದೆ ಲೈಕು
ಕಾಮೆಂಟುಗಳ ಲೆಕ್ಕಾಚಾರ
ಪ್ರದರ್ಶನದ ಗೀಳಾಚಾರ
ಆದರೂ
ಸೆಲ್ಫಿಗೆ ಬರವಿಲ್ಲ
ಸೆಲ್ಫಿಯೊಳಗಿನ ಅಮ್ಮನ
ಮೊಗದಲ್ಲಿ ನಗುವಿಲ್ಲ
ಇನ್ನಾದರೂ ಬದಲಾಗಲಿ
ಡಿಪಿ ಸ್ಟೇಟಸ್ ನಲ್ಲಿರುವ ಅಮ್ಮ
ಮನೆ(ನ)ಯಲ್ಲಿರಲಿ
ಫೇಸ್ಬುಕ್, ಸ್ಟೋರಿಯಲ್ಲಿರುವ
ಮಾತೃಪ್ರೇಮ ಎದೆಯಲ್ಲಿರಲಿ
ಅಮ್ಮನ ಮೊಗದಲ್ಲಿ ನಗುವಿರಲಿ
ಆಗ
ದೂರವಾಗಲಿ ವೃದ್ಧಾಶ್ರಮಗಳು
ಹತ್ತಿರವಾಗಲಿ ಕರುಳುಬಳ್ಳಿಗಳು
ನಿಜವಾದ ಮಾತು… ತೊರ್ಪಡಿಕೆಯ ಪ್ರೀತಿ