ಅಮ್ಮಂದಿರ ದಿನದ ವಿಶೇಷ

ಕಾವ್ಯಸಂಗಾತಿ

ಅಮ್ಮಂದಿರ ದಿನದ ವಿಶೇಷ

ತಾಯಿ ಇವಳು

ಒಲವು

ನೋವಿಗೆ ಬಣ್ಣ ತುಂಬಿ
ನಗುವ ಚಿತ್ರ ಬಿಡಿಸುವ ಕಲೆಗಾರ್ತಿ

ಕಂಡೂ ಕಾಣದ
ಮಿಂಚಿ ಮಾಯವಾಗುವ ಕವಿತೆ

ಒಡಲೊಳಗೆ ಒಲವ ತೊಟ್ಟಿಲು
ತೂಗುವ ಮಮತಾಮಯಿ

ತನುಮನಗಳ ಬಾಲ್ಯದಿಂದಲೇ
ತಾಯಾಗಲು ಪೊರೆದ ಯುಕ್ತಿ

ಕನಸುಗಳಿಗೆ ನಿತ್ಯನಿರಂತರ
ತಾಯ್ತನ ತುಂಬಿದ ಛಲಗಾರ್ತಿ

ಅಳುವ ಕಂದನಿಗಾಗಿ ನಗುವಿನಾಸೆ
ತೊರೆದ ತ್ಯಾಗಮಯಿ

ಕಂದನ ನಗುವಿಗಾಗಿ ನೋವುಗಳ
ನೂಕಿ ನಗುವ ಸಹನಾಮಯಿ

ನವಮಾಸವಲ್ಲ ಬದುಕಿನುದ್ದಕ್ಕೂ
ಕಂದನ ಹೊರುವ ಶಕ್ತಿ

ತನ್ನುಸಿರ ತೊರೆದು ನವಜೀವವೊಂದಕ್ಕೆ
ಉಸಿರಾಗುವ ಪ್ರಾಣವಾಯು

ಕತೆಯಾದವಳು, ಪದ್ಯವಾದವಳು
ಮಾತಿಗೆ ನಿಲುಕದ ಮಾಯೆ….


Leave a Reply

Back To Top