ಅಮ್ಮಂದಿರ ದಿನದ ವಿಶೇಷ

ಸಣ್ಣ ಕತೆ

ಅಮ್ಮಂದಿರ ದಿನದ ವಿಶೇಷ

“ತಾಯಂದಿರ ದಿನ”

ರೇಖಾ ಭಟ್ ಹೊನ್ನಗದ್ದೆ

“ಪಪ್ಪಾ.. ಇವತ್ ಅಜ್ಜಿ ನೋಡೋಕೆ ಹೊರಟೆಯಂತೆ. ನಾನು ಬರ್ಲಾ ..?”
“ಇವತ್ತು ಬೇಡ, ನಂಗೆ ಬೇರೆ ಕಡೆ ಫಂಕ್ಷನ್ ಮುಗಿಸಿ ಅಲ್ಲಿಗೆ ಹೋಗ್ಬೇಕು …” ಎಂದು ಅವಸರವಾಗಿ ಹೊರಟ ಸಂದೇಶ. “ತಾಯಂದಿರ ದಿನ ” ಕಾರ್ಯಕ್ರಮದಲ್ಲಿ ತಾಯಿಯ ಬಗ್ಗೆ ಅದ್ಭುತವಾಗಿ ಮಾತನಾಡಿದ ಸಂದೇಶ ಕಾರ್ಯಕ್ರಮ ಮುಗಿದ ನಂತರ ವೃದ್ಧಾಶ್ರಮದ ಕಡೆಗೆ ಕಾರು ಓಡಿಸಿದ. ದಾರಿ ಮಧ್ಯದಲ್ಲಿ ಸಕ್ಕರೆ ಖಾಯಿಲೆಯಿಂದ ಬಳಲುತ್ತಿರುವ ಅಮ್ಮ ಶುಗರ್ ಪ್ರೀ ಕೇಳಿದ್ದು ನೆನಪಾಯ್ತು. ‘ಇನ್ನೊಮ್ಮೆ ಬರುವಾಗ ತಂದರಾಯ್ತು ಬಿಡು’ ಎಂದು ಆಶ್ರಮದ ಒಳಗೆ ನಡೆದ. ಇವನು ‘ಹ್ಯಾಪಿ ಮದರ್ಸ್ ಡೇ ‘ಎನ್ನುವ ಮೊದಲೇ ಅಮ್ಮ ಅವಳೇ ಹೊಲಿದ ಐದಾರು ಮಾಸ್ಕ್ ಗಳನ್ನು ಅವನ ಕೈಗಿತ್ತು “ಹೊರಗಡೆ ಓಡಾಡೋವಾಗ ಹುಷಾರು ಮಗಾ” ಎಂದಳು.


ರೇಖಾ ಭಟ್ ಹೊನ್ನಗದ್ದೆ

Leave a Reply

Back To Top