ಅಮ್ಮಂದಿರ ದಿನದ ವಿಶೇಷ

ಕಾವ್ಯ ಸಂಗಾತಿ

ಅಮ್ಮಂದಿರ ದಿನದ ವಿಶೇಷ

ಬತ್ತದ ಚಿಲುಮೆ

ಗಿರಿಜಾ ಇಟಗಿ

ಅಮ್ಮಾ ನಿನ್ನ ಮಡಿಲಿನಲ್ಲಿ
ಆನಂದದ ಹೊನಲಿದೆ
ನಿನ್ನ ಸೆರಗ ಮರೆಯಲಿ
ನೆಮ್ಮದಿಯ ಗೂಡಿದೆ||

ನಿನ್ನ ಲಾಲಿ ಹಾಡಿನಲ್ಲಿ
ಜಗವ ಮರೆಸೊ ಬಲವಿದೆ
ನಿನ್ನ ಕೈಯ ತುತ್ತಿನಲ್ಲಿ
ಅಮೃತವೇ ತುಂಬಿದೆ||.

ನಿನ್ನ ತೋಳ ತೆಕ್ಕೆಯಲ್ಲಿ
ಚಂದಿರನ ತಂಪಿದೆ
ನಿನ್ನ ಹೆಜ್ಜೆ ಗುರುತಿನಲ್ಲಿ
ನನ್ನ ಬದುಕು ಸಾಗಿದೆ||

ಅಮ್ಮನಿಲ್ಲದ ಮನೆಯೂ
ನೀರಿಲ್ಲದ ಭುವಿಯಂತೆ
ಸುಖದ ಆಗರ ನೀನು
ಬರಿದಾಗದ ನಿಧಿಯು

ಬತ್ತದಂತ ಚಿಲುಮೆ ನೀನು
ನಿನ್ನ ಒಲವಿಗಾರು ಸಾಟಿ?
ದೇವತೆಗಳ ಪ್ರತಿ ರೂಪ
ಮಾತೃ ಹೃದಯವಲ್ಲವೇ?


 ಗಿರಿಜಾ ಇಟಗಿ

3 thoughts on “ಅಮ್ಮಂದಿರ ದಿನದ ವಿಶೇಷ

  1. ಹಣೆಯಲ್ಲಿ ದೊಡ್ಡ ಕುಂಕುಮ ಇರುವ, ಇವರು ಡಾ. ಹೆಚ್.ಗಿರಿಜಮ್ಮ. ಪ್ರಸಿದ್ಧ ಪ್ರಸೂತಿ ತಜ್ಞೆ. ಉತ್ತಮ ಸಾಹಿತಿ ಮಹಿಳೆಗೆ ಸಂಬಂಧಿತ ಅನೇಕ ಉಪಯುಕ್ತ ವೈದ್ಯಕೀಯ ಲೇಖನಗಳು, ಕಥೆ, ಕಾದಂಬರಿಗಳು,ವೈದ್ಯಕೀಯ ರಂಗದ ಆಗು ಹೋಗುಗಳನ್ನು ಕುರಿತ ಬರವಣಿಗೆಗಳನ್ನು ಸಾಹಿತ್ಯ ರಂಗಕ್ಕೆ ನೀಡದ್ದಾರೆ. ಅದೂ ಅಲ್ಲದೇ ಚಂದನದಲ್ಲಿ ಇವರ ನಿರ್ಮಾಣ ನಿರ್ದೇಶನದ ಧಾರಾವಾಹಿಗಳು ಪ್ರಸಾರವಾಗಿವೆ..ಇವರು ಬಹುಮುಖ ಪ್ರತಿಭೆ ಇತ್ತೀಚೆಗೆ ನಮ್ಮನ್ನು ಅಗಲಿದ್ದಾರೆ!

    ಆದರೇ ಇಲ್ಲಿ ಬಂದಿರುವ ಹೆಸರು ಗಿರಿಜಾ ಇಟಗಿ ಅಂತ. ಅವರಿಗು ಇವರಿಗು ಈ ಕವನಕ್ಕೂ ಏನು ಸಂಬಂಧ? ಮೇಲಿರುವ ಫೋಟೋ ಡಾಕ್ಟರ್ ಗಿರಿಜಮ್ಮ ಅವರದ್ದು ಕೆಳಗಿನ ಫೋಟೋ ದಲ್ಲಿ ಇರುವವರು ಈ ಕವನದ ಲೇಖಕಿಯ? ಹಾಗಾದರೆ ದಿವಂಗತ ಡಾಕ್ಟರ್ ಗಿರಿಜಮ್ಮ ನವರ ಫೋಟೋ ಕ್ಕು ಈ ಕವನಕ್ಕೂ ಏನು ಸಂಬಂಧ?

    1. ಮೇಲಿನ ಫೋಟೋ ದಲ್ಲಿ ಇರುವವರು ಡಾ.ಗಿರಿಜಮ್ಮನವರೇ.
      ಕೆಳಗಡೆ ಫೋಟೋದಲ್ಲಿ ಗಿರಿಜಾ ಇಟಗಿ ಅವರ ಅಮ್ಮ ಇರೋದು.
      ಬಹುಶಃ ಕೈ ತಪ್ಪಿನಿಂದ ನನ್ನ ಫೋಟೋದ ಬದಲಿಗೆ ಡಾಕ್ಟರ್ ಗಿರಿಜಮ್ಮ ಅವರ ಫೋಟೋ ಅಚ್ಚಾಗಿದೆ.
      ಕ್ಷಮೆ ಇರಲಿ

Leave a Reply

Back To Top