ಹೊಂಗಿರಣ-ಸುಲಭಾ ಜೋಶಿ 

ಕಾವ್ಯಸಂಗಾತಿ

ಹೊಂಗಿರಣ

ಸುಲಭಾ ಜೋಶಿ ಹಾವವನೂರ

ಮುನ್ನ ಬೆಳಗಿನ
ಹೊಂಗಿರಣ
ವಸುಂದರೆಯ ಮೇಲೆ
ಹಾಸಿತ್ತು.
ಚಿಗುರೆಲೆಗಳ ಮೇಲೆ
ಸೂಸಿತ್ತು
ಪಲ್ಲವಿಸಿತ್ತು ತಳಿರು
ಪಕ್ಷಿಗಳ ನಲಿವು
ಪುಷ್ಪಮಂಜರಿ ಸೊಗಸುs
ಸೊಗಸಿನ ಸುಮoಗಲ
ದವಬಿಂದು ತಂಪಿನ
ಹೊಳಪು. ಆಹಾ
ಎಷ್ಟೊಂದು ಶ್ರೀಮಂತ
ಎಷ್ಟೊಂದು ಧೀಮಂತ
ಒತ್ತಡದ ಧಾವಂತಕ್ಕೆಲ್ಲಿ
ಧನ್ಯತೆಯ ಧ್ಯಾನ,ಇಲ್ಲ
ಚಿಗುರುವ ಸಂಭ್ರಮ.
ಮುನ್ನ ಬೆಳಗಿನ ಹೊಂಗಿರಣ
ವಸುಂಧರೆಯ ಮೇಲೆ
ಹಾಸಿತ್ತು.
ಅದು ಪದ್ಯವಾಗುವ
ಚಿನ್ನಮಯ ಸಂವಾದ
ಅಲ್ಲೇ ಉತ್ತುಂಗ ಶಿಖರದ ಶಿಖರದ
ಭವ್ಯತೆಯು ಇತ್ತು.
ಅದೇ ಚಲನೆಯ
ರಥ ಶ್ರುತಿ.
ಮುನ್ನ ಬೆಳಗಿನ ಹೊಂಗಿರಣ
ವಸುಂಧರೆಯ ಮೇಲೆ
ಹಾಸಿತ್ತು.
ಚಿಗುರೆಲೆಗಳಿಗೆ
ಸೂಸಿತ್ತು.


Leave a Reply

Back To Top