ಕಾವ್ಯ ಸಂಗಾತಿ
ಗಜಲ್
ಪ್ರೊ ರಾಜನಂದಾ ಘಾರ್ಗಿ
ಬರದ ಛಾಯೆ ಕರಗುತಿದೆ ಸೋನೆಯ ಸಂಗದಲಿ ಬರುವೆಯೇನು ಮತ್ತೆ
ಮರದ ಎಲರು ಚಿಗುರುತಿವೆ ನಸುಗೆಂಪ ರಂಗಿನಲಿ ಬರುವೆಯೇನು ಮತ್ತೆ
ನಿಸರ್ಗ ಉಲಿಯುತಿದೆ ರಸಕಾವ್ಯ ಪ್ರೇಮರಾಗ ಆಲಾಪದಲಿ ನುಡಿಯುತ
ನಾಟ್ಯವಾಡುತಿರುವ ನವಿಲಿನ ಶೃಂಗಾರದಲಿ ಬರುವೆಯೇನು ಮತ್ತೆ
ಮೋಡಗಳು ಬಸಿರಾಗುತಿವೆ ಸೂರ್ಯನ ಬಿಸಿಲಿನ ಕಾವಿಗೆ ಮಾಗುತ್ತಿವೆ
ವರ್ಷಾ ಧಾರೆಯಲಿ ಧರೆ ಮುಳುಗಿ ಸೂಸುತಿರುವ ತಂಪಿನಲಿ ಬರುವೆಯೇನು ಮತ್ತೆ
ಸತ್ತ ಭಾವಗಳೆಲ್ಲ ಎದ್ದು ಕುಣಿದಾಡುತಿವೆ ಮನವನು ಆವರಿಸುತಿವೆ
ನಾಸಿಕದಲಿ ಅಡರಿಕೊಳ್ಳುವ ಆಕಾಂಕ್ಷೆಗಳ ಪರಿಮಳದಲ್ಲಿ ಬರುವೆಯೇನು ಮತ್ತೆ
ಭರವಸೆಗಳ ಸುಳಿಗಾಳಿ ಸೂಸುತಿದೆ ಆವರಿಸುತಿದೆ ರಾಜಿಯ ಹೃದಯವನು
ಹೃದಯದಿ ತುಂಬಿದ ಆತ್ಮ ವಿಶ್ವಾಸದ ಹೋಂಬೆಳಕಿನಲಿ