ಗಝಲ್

ಕಾವ್ಯ ಸಂಗಾತಿ

ಗಝಲ್

ಬಾಗೇಪಲ್ಲಿ

ಎತ್ತ ಹೋಯಿತು ಆ ಹಸಿರು ಗಿಡ ಬಳ್ಳಿ ಮರ ಕಾಣದಾಗಿದೆಯಲ್ಲಾ ಮಾತೆ ವಸುಂಧರೆ.
ಎತ್ತ ಹೋದವು ಆ ಗುಬ್ಬಿ ಗಿಳಿ ಗೊರವಂಕ ನೋಡದಾಗಿದೆಯಲ್ಲಾ ಮಾತೆ ವಸುಂಧರೆ.

ಬಾಲ್ಯದಲಿ ಅರಿವಿರದೆ ಕುತೂಹಲಕೆ ಗುಬ್ಬಿ ಗೂಡು ಕೆಡವಿ ಮೊಟ್ಟೆ ಮರಿ ಹಾಳಾಗಿಸಿದ್ದು ಖರೆಯೇ
ಈಗ ಕಾಳೆಸೆದು ಒಲೈಸಿ ಕಾದು ಕೂತರೂ ಹಕ್ಕಿ ಬಾರದಾಗಿದೆಯಲ್ಲಾ ಮಾತೆ ವಸುಂಧರೆ.

ದುರಾಸೆಗೆ ವನ ಸಂಪತ್ತನು ಹಣವಾಗಿಸುವ ಬರದಿ ನಿನ್ನೊಡಲಿಗೆ ಕೈ ಹಾಕಿದೆವು
ಇಂದನ ಉರಿಸಿ ಭುವನವೆಲ್ಲಾ ಮಲಿನವಾಗಿದೆಯಲ್ಲಾ ಮಾತೆ ವಸುಂಧರೆ.

ಪಾದ ಸ್ಪರ್ಷಂ ಕ್ಷಮತ್ವಮೇ ಎಂದು ಮೈಬಗ್ಗಿಸಿ ನಮಿಸಿದ ಕಾಲವಿತ್ತುಂತೆ ಕೇಳಿಹೆ ತಾಯೆ
ನಮ್ಮನು ಪೊರೆದಷ್ಟು ನಮ್ಮ ಮಕ್ಕಳ ಪೊರೆಯದಾದೆಯಲ್ಲಾ ಮಾತೆ ವಸುಂಧರೆ.

ಕೃಷ್ಣ ಬೇಡುತಿಹ !ನಮ್ಮ ತಪ್ಪಿಗೆ ನಮ್ಮ ಮಕ್ಕಳ ಶಿಕ್ಷಿಸುವಂತಾಗದಿರಲಿ ತಾಯೆ
ಇಷ್ಟಾದರೂ ನಮಗೆ ಅರಿವು ಮೊಡಲಿಲ್ಲೆಂದು ಗೋಳಾಡುತಿರುವೆಯಲ್ಲಾ ತಾಯೆ ವಸುಂಧರೆ.


Leave a Reply

Back To Top