ಮಹಾವೃಕ್ಷ

ಕಾವ್ಯ ಸಂಗಾತಿ

ಮಹಾವೃಕ್ಷ

ಸುಲಭಾ ಜೋಶಿ  ಹಾವನೂರ

ನಿಂತ್ತಲ್ಲೇ ನಿಂತ
ನಿನ್ನ ಶಿಸ್ತು ಸರಳತೆಗೆ
ನಿನ್ನ ಅರಳುವಿಕೆಗೆ
ನಿನ್ನ ಸೌಂದರ್ಯಕ್ಕೆ
ನಿಂತ್ತಲ್ಲೇ ನಿಂತ
ನಿನ್ನ ಚಲನಶೀಲತೆಗೆ
ಮಳೆ, ಹಿಮಮಳೆ
ಉಗ್ರ ಬಿಸಿ
ಕೊರೆಕೊರೆವ ಚಳಿ
ಏನಿಲ್ಲ ಏನಿದ್ದರೂ
ನಿಂತಲ್ಲೇ ನಿಂತ ಧೃಡತೆ
ಅದೇ ಮೌನ
ಗಟ್ಟಿ ನೆಲದೊಂದಿಗೆ
ಆಕಾಶ ವಿಸ್ತಾರಕೆರುವ
ಧ್ಯಾನವೊ, ತಪವೋ
ಜ್ಞಾನವೋ, ಭಕ್ತಿಯೋ
ಕರ್ಮಯೋಗವೋ
ಗೊತ್ತಿಲ್ಲ.
ಇಷ್ಟಾಗಿಯೂ ನಿನ್ನ ಧೃಡತೆಗೆ
ನಿನ್ನ ಪ್ರಫುಲ್ಲಿತ ಪ್ರಸನ್ನತೆ
ನನ್ನ ಮನದುಂಬಿಗೆ
ನಂಬಿಕೆಯ ಮಹಾವೃಕ್ಷ.


Leave a Reply

Back To Top