ಕಾವ್ಯಸಂಗಾತಿ
ಕಳೆದು ಹೊಗಿರುವೆ
ಶಾಂತಲಾ ಮಧು
ಕಳೆದುಹೊಗಿರುವೆ
ಸಾವಿರಾರು ಸಾವಿರಾರುಗಳ
ನಡುವೆ ಒಂದಾಗಗಿ
ನಾನಂದು
ಹಸಿರುಟ್ಟ ಬೆಟ್ಟಗುಡ್ಡ
ನೀಲಾಕಾಶ ಝರಿ
ನವಿಲ ಕುಣಿತಗಳಲ್ಲಿ
ಕಳೆದು ಹೊಗಿದ್ದೆ
ಬಿಸಿಉಸಿರ ಉಸಿರಿಗೆ
ಉಸಿರಾಗಿ ರೆಕ್ಕೆ ಪುಕ್ಕದಲಿ
ನೆರಳಾಗಿ
ಬೀಸುವ ಅಲೆ ಅಬ್ಬರಕೆ
ಮರಳದಿಣ್ಣೇಯಂತಾಗಿ
ಕಳೆದು ಹೊಗಿದ್ದೆ
ಚಿಗುರ ಕನಸಿಗೆ
ಕೂಸಾಗಿ ಹಾಡಗಿ
ಹಕ್ಕಿಯಾಗಿ
ಗಮಗಮಿಪ ಪುಷ್ಪಕ್ಕೆ
ಇಂಪುತಂಪಿನ ಸಖಿಯಾಗಿ
ನೇವರಿಸಿ ನಲಿಯುತ
ಕಳೆದು ಹೊಗಿದ್ದೆ
ಕಳೆದು ಹೋಗಿರುವೆ
ಕಲ್ಲುಕಲ್ಲುಗಳ
ನಡುವೆ
ಬಿರಿದ ಇಟ್ಟಂಗಿಗಳನಡುವೆ
ನಗರ ನಾಣ್ಯಗಳ ನಡುವೆ
ಸಾವಿರಾರು ಸಾವಿರಾರುಗಳ
ನಡುವೆ
ಕಳೆದು ಹೊಗಿರುವೆ
ಬಣ್ಣಕ್ಕೆ ಬಣ್ಣವಾಗಿ
ಹಾಡಿಗೆ ಸ್ವರವಾಗಿ
ನೃತ್ಯಕ್ಕೆ ಹೆಜ್ಜೆಯಾಗಿ
ನೀಲಾಕಾಶ ಭೂಮಿಗೆ
ಕನಸ ಸೇತುವೆ ಹೆಣೆಯುತ್ತ
ಕಾಮನಬಿಲ್ಲುತಾನಾಗಿ
ಕಳೆದು ಹೊಗಿದ್ದೆ
ಮನ ಮನೆಯ ಒಳಹೊಕ್ಕು
ಪ್ರೀತಿ ಚಿಗುರುಗಳ ಹುಡುಕಿ
ರೆಂಬೆ ಕೊಂಬೆಗಳ
ಬಳಸಿ ಬೆಂಡಾಗಿ
ಕಳೆದು ಹೊಗಿರುವೆ
ಮನಸಿನಾಳದ
ವಿಕೃತಿ ವಿಕಾರಗಳ
ಸುಳಿಗಳು ಸುತ್ತಿ ಸುತ್ತಿ
ಮೇಲೇಳಲು
ಅಟ್ಟಹಾಸವ
ಅದುಮಿ
ಅಸ್ಥಿತ್ವವದ ಹುಡುಕುತ್ತ
ಕಳೆದು ಹೊಗಿರುವೆ
ಇಟ್ಟ ಹೆಜ್ಜೆಗಳು
ಹುದಗಿ ಆಳದಲಿ
ತಪ್ಪು ಒಪ್ಪುಗಳೆಸ್ಟು
ಸುಂಕವಿಲ್ಲದ ಹಾದಿ
ನೆರೆದ ಕೂದಲು
ಅಗೋಚರವದು
ಮುಂದಿನ ಹಾದಿ
ಕಳೆದು ಹೋಗಿರುವೆಸಾವಿರ
ಸಾವಿರದಲಿ ಒಂದಾಗಿ
Excellent