ಡಾ.ಡೋ ನಾ ವೆಂಕಟೇಶ ಎರಡು ಕವಿತೆಗಳು

ಕಾವ್ಯ ಸಂಗಾತಿ

ಡಾ.ಡೋ ನಾ ವೆಂಕಟೇಶ ಎರಡು ಕವಿತೆಗಳು

ಅಪ್ಪ ನಿರ್ಲಿಪ್ತ

3,298 Old Father And Son Illustrations & Clip Art - iStock

ಅಮ್ಮ ಮಮತಾ ಸಾಗರದಾಳ
ಪ್ರೀತಿ ನಿರಾಳ

ಅಪ್ಪ ಎಷ್ಟೆತ್ತರ
ಕಡಿದಾದ ಹಾದಿ ನಿರಂತರ
ಕಠೋರ ಮುಖದ ಮುಕ್ಕ
ಮನದಲ್ಲೇ ಪ್ರೀತಿ ಮಾಡುವ ಜಾತಿ

ನಾವು ಮಕ್ಕಳ ಒಡನಾಟ
ಅಮ್ಮನ ಕೈಯ್ಯೂಟ ಸದಾ
ಸವಿ ಸಾಗರ
ಕರುಣಾಮಯಿ ಅಮ್ಮ
ನೋಡಿ ಕಣ್ತುಂಬಾ ಸದಾ
ಹಂಬಲಿಸುವ ಜೀವ

ಅಪ್ಪ ಅದೇ ಕಷ್ಟ ಜೀವಿ
ದೂರ ದೂರ ಯೋಚನೆ ಮಾಡುತ್ತಾ ಜೀವನ ಪಾಠದ
ಏಳು ಬೀಳುಗಳ ನಿಭಾಯಿಸುತ್ತ ನಡೆಯುತ್ತ
ಸವೆಯುತ್ತ ಹೆಗಲ ಮೇಲಿನ
ನೋವು ಮರೆಯುತ್ತ
ಮನದಲ್ಲೆ ನಗುತ್ತ
ಸದಾ ಆತ್ಮ ತೃಪ್ತ

ನಿಮ್ಮ ಕಣ್ಣ ಮುಂದೆ ಕಾಣದ
ನಿರ್ಲಿಪ್ತ

*******

ಪಿತೃ ತೃಪ್ತಿ

ನನ್ನ ದಿನ ಕಳೆದಂತೆ
ಸ್ಥಿತ ಪ್ರಜ್ಞೆ ಬೆಳೆದಂತೆ ಕಂದ
ನಿನ್ನ ನೆನಪೇ ಮಂದ ಮಾರುತ
ನಿನ್ನ ಆಟೋಟ ನಿನ್ನ ಹಂತ ಹಂತದ ಮಿಗಿಲಾಟ ಅನುಭವಿಸಿ ಮನಸ್ಸು
ಮಹಾಪೂರ . ನಿನ್ನ ಮಾತೇ
ಮಧುರ ನಿನ್ನ ಕಥೆಯೇ ಮಂತ್ರಮಗ್ಧ ನಿನ್ನ ನೆನೆದಾಗ
ಧಬಧಬಿಸುವ ವರ್ಷಾಧಾರೆ!ಉತ್ಸಾಹ ಉಲ್ಲಾಸದ ಉಲ್ಕಾಪಾತ !!

ನೀ ಜನ್ಮತಳೆದಾಗಿ ತೃಪ್ತಿ ಹಸನಾಗಿ ಒಂದು
ಓಯಸಿಸ್
ಮರೀಚಿಕೆಯಲ್ಲ ನೀ
ಕರೆದಾಗ ಬರುವೆ.
ಬಂದಾಗ ಕಾರಂಜಿಗಳ ಹೊತ್ತು
ತರುವೆ.
ನೀ ವಾತ್ಸಲ್ಯ
ನೀ ಹರ್ಷ
ನೀ ಅಭಿಮಾನಿ
ನೀ ನನ್ನ ಹೆಮ್ಮೆ
ನೀ ನನ್ನ ತೃಪ್ತಿ



37 thoughts on “ಡಾ.ಡೋ ನಾ ವೆಂಕಟೇಶ ಎರಡು ಕವಿತೆಗಳು

    1. ಹೃದಯ ಸ್ಪರ್ಶಿ ಕವಿತೆಗಳು.

    1. ಕವಿತೆಗಳು ತುಂಬಾ ಚನ್ನಾಗಿವೆ.
      Excellent,Sir

  1. Both the poems are excellent in their own ways. Loved it, one shows the love showered from parents in their own ways and the other is the satisfaction of having a daughter.

  2. Sindhura U. V.
    These Poems are wonderful. Each word touches our heart. Heege saagali nimma Sahithya Krishi. In future, we expect few more beautiful Poems from you. So… Please continue this journey. All the best..

  3. ಎರಡು ಕವಿತೆಗಳೂ ತುಂಬಾ ಸುಂದರವಾಗಿ ಮೂಡಿ ಬಂದಿವೆ. ಅಪ್ಪ-ಅಮ್ಮನ ಪ್ರೀತಿಯ ವಿಷಯ ಒಂದು ಸಾಗರದಂತೆ .

Leave a Reply

Back To Top