ಬಾಲ ಕಾರ್ಮಿಕ

ಕಾವ್ಯ ಸಂಗಾತಿ

ಬಾಲ ಕಾರ್ಮಿಕ

ಪ್ರೊ ರಾಜನಂದಾ ಘಾರ್ಗಿ

Child Labour in India: Violators go scot-free as only 25% cases reach  conviction - India News

ಮುಗ್ಧ ಮಲಿನ ಮುಖಗಳು
ಕೈಯಲ್ಲಿ ಒರೆಸುವ ಬಟ್ಟೆ
ಕಣ್ಣುಗಳಲ್ಲಿ ಕನಸುಗಳು
ಮನದಲ್ಲಿ ತುಂಬಿದ ಹತಾಶೆ
ಆಡುವ ವಯಸ್ಸಿನಲ್ಲಿ
ಶಾಲೆಯ ದಾರಿತಪ್ಪಿಸಿ
ಪುಸ್ತಕಗಳ ಕಸಿದು ಕೊಂಡವು
ಹೆಗಲೇರಿದ ಜವಾಬ್ದಾರಗಳು
ಬದುಕು ಕಟ್ಟಿಕೊಳ್ಳಲು
ಬಾಲ್ಯವನ್ನೆ ಬಲಿಕೊಟ್ಟು
ಹಲವು ಹೊಟ್ಟೆ ಹೊರೆಯುವ
ಅನಿವಾರ್ಯತೆಗೆ ಬಲಿಪಶು
ದೇಶದ ಭವಿಷ್ಯತ್ತಿನ ಸಂಕೇತ
ನಾಳಿನ ನಾಗರೀಕತೆಯ ಬಿಂಬ
ಇಂದು ಕಗ್ಗತ್ತಲೆಯತ್ತ ತಿರುಗಿ
ಸಾಗುತಲಿರುವ ಬಾಲಕಾರ್ಮಿಕ


2 thoughts on “ಬಾಲ ಕಾರ್ಮಿಕ

Leave a Reply

Back To Top