ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ನಾವು ಭಾರತೀಯರು

ಆಶಾದೀಪ

ಸತ್ವ ವಿಲ್ಲದ ಘೋಷಣೆಗಳಿಂದ
ಸಾರವಿಲ್ಲದ ಮಾತುಗಳಿಂದ
ಸಾಕರವಿಲ್ಲದ ಜೀವದಿಂದ
ಕೂಗುತಿರುವೆವು
ನಾವು ಭಾರತೀಯರು
ಹಾಂ ನಾವು ಭಾರತೀಯರು

ಸಾವಿರ ತೂತಿನ ಸಾಲದ ಹೊದಿಕೆ
ಸುತ್ತಲಾರದು ನಮ್ಮ ಮೈ
ದರಕಾಸ್ತಿಗೆ ಬರೆದವು
ದೇಶವನ್ನೆ
ಆದರೂ ನಾವು ಭಾರತೀಯರೆ
ಹಾಂ ನಾವು ಭಾರತೀಯರು

ಒಂದು ಕಡೆಯಲ್ಲಿ
ಬಡತನದ ಬಾಳು
ಇನ್ನೊಂದೆಡೆಯಲ್ಲಿ
ಶ್ರೀಮಂತರಿಂದ ಹಾಳು
ಕೋಸರಿಕೊಳ್ಳುವುದರಲಿ
ಪುಡಾರಿಗಳು
ಎಷ್ಟೇಂದರೂ ನಾವು
ಭಾರತೀಯರು
ಹಾಂ ನಾವು ಭಾರತೀಯರು

ವಾರದಲ್ಲಿ ನಾಲ್ಕು ದಿನ ರಜೆಯಲ್ಲಿ ಕಳೆದವು
ಇದ್ದ ಮೂರುದಿನದಲ್ಲಿ ಎರಡು ದಿನ
ಆಫೀಸಿನಲ್ಲಿ ನಿದ್ದೆ
ಇನ್ನೊಂದು ದಿನಕ್ಕಾಗಿ
ಬೇಡುವೆವು ದೇವರ
ಅಯೋ ಯಾರಾದರೂ ಸತ್ತಿದರೆ
ಆದರೂ ನಾವು ಭಾರತೀಯರೆ
ಹಾಂ ನಾವು ಭಾರತೀಯರೆ

ಸ್ವಾವಲಂಬನೆ ಸಾಧ್ಯವಿಲ್ಲ
ಬಡವರಿಂದ ತುಂಬಿದ ಶ್ರೀಮಂತ ದೇಶ
ಸ್ವತಂತ್ರಿಕೆಯ ಅಥ೯ ಗೊತ್ತಿಲ್ಲ
ಸದ್ಭಾವನೆ ಮೊದಲೆ ಇಲ್ಲ
ನಾವು ಭಾರತೀಯರು
ಹಾಂ ನಾವು ಭಾರತೀಯರೆ

ಕೆಂಪು ಕೋಟೆಯಲ್ಲಿ ಹಾರಿದ ಕೇತನಾ
ವಷ೯ಕ್ಕೆರಡು ದಿನ
ಒಂದೂ ಗೂಡಿದ ಭಾವನ
ಉಳಿದ ದಿನಗಳಲ್ಲಿ ಗಲಭೆ ಸಂಪು
ಇಲ್ಲದಿದ್ದರೆ ಆಗದು ಬಾಳು ತಂಪು
ಹಾಂ ನಾವೇ ಭಾರತೀಯರು
ನಾವು ಭಾರತೀಯರೆ


About The Author

1 thought on “ನಾವು ಭಾರತೀಯರು”

Leave a Reply

You cannot copy content of this page

Scroll to Top