ಕ್ಷಮಿಸಿ ಬಿಡು

ಕಾವ್ಯಸಂಗಾತಿ

ಕ್ಷಮಿಸಿ ಬಿಡು

ಡೋ ನಾ ವೆಂಕಟೇಶ

ಕ್ಷಮಿಸಿ ಬಿಡು ಮತ್ತೊಮ್ಮೆ
ಚಲಿಸಿ ಬಿಡು ಮಗದೂಮ್ಮೆ
ನಿನ್ನ ಪ್ರತಿಷ್ಠೆ ನಿನ್ನೇ ಸುಡುವ ಮುನ್ನ, ನಿನ್ನ ಅಹಂ ನಿನ್ನೆ –
ನಾಳೆ ಅನ್ನುವ ಮುನ್ನ,
ಇಂದು ಈ ಕ್ಷಣ
ಬೊಗಸೆಯಿಂದ ಜಾರುವ ಮುನ್ನ!

ತಿಳಿಗೊಳದಂತಾಗು
ಒಳಗೊಂದು ಹೊರಗೊಂದಂತಾಗು, ನಿನ್ನ
ಮನ ತಟ್ಟುವ ಮುನ್ನ,ನಿನ್ನ ಮನೆ ಕದ ತೊರೆಯುವ ಮುನ್ನ
ಮತ್ತೊಮ್ಮೆ ಕ್ಷಮಿಸಿ ಬಿಡು ಚಿನ್ನ

ನಿನ್ನ ಮನದ ಸಾರ್ಥಕತೆಗೆ
ನಿನ್ನ ಉಸಿರಾಟದ ಸ್ವಸ್ಥಕ್ಕೆ
ನಿನ್ನ ಪರಿಸರದ ಶುದ್ಧತೆಗೆ
ಕ್ಷಮಿಸಿ ಬಿಡು ಮಗದೊಮ್ಮೆ

ಮುಗಿಲ ಸೇರುವ ಮುನ್ನ
ಮಡಿಲ ಮೋಹ ಸೆಳೆಯುವ ಮುನ್ನ
ಚಿನ್ನ ಕ್ಷಮಿಸಿ ಬಿಡು ಇನ್ನೊಮ್ಮೆ

ಎಪ್ಪತ್ತರ ಹರೆಯ ಇಪ್ಪತ್ತರ ಪ್ರಾಯದ ನೆನಪಿನಲ್ಲಿ ಉಳಿದಿದ್ದ
ಕ್ಷಮಿಸಿ ಬಿಡು. ಉದ್ದುದ್ದ ಭಾಷೆ
ಅದೇ ಉದ್ಘೋಷ ಆ ವೇಷ
ಎಂಥ ಆವೇಶ!
ಮರೆತು ಬಿಡು ಕ್ಷಮಿಸಿ ಬಿಡು
ಜೀವ ಜೀವದ ನಡುವೆ ಎಂಥ
ಅನುಮಾನ .ಅಪಮಾನ
ಅಸಮಾಧಾನ ಅಸಮ್ಮತಿ !
ಬೆಳೆಯಲಿ ಬಿಡು ಹೊಸ ಮಾನ
ಹೊಸ ಚಿಗುರು ಹೊಸ ಚೈತನ್ಯ
ಹೊಸ ಹಸಿರು .ಎಂದೇ ಬೆಳೆಯಲಿ ಬಿಡು ಹೊಸ ಉಸಿರು .

ಎಂದೇ ಕ್ಷಮಿಸಿ ಬಿಡು ಎಲ್ಲ
ನಿನ್ನ ಸ್ವಾರ್ಥಕ್ಕಾಗಿ ನನ್ನ ಚಿನ್ನ!
ಕ್ಷಮಿಸಿ ಬಿಡು ಮತ್ತೊಮ್ಮೆ
ಮಗದೊಮ್ಮೆ!!!



4 thoughts on “ಕ್ಷಮಿಸಿ ಬಿಡು

  1. ಬಹಳ ಸುಂದರ ಸಾಲುಗಳ ಮೂಲಕ ಮನದ ಇಂಗಿತ…..
    ಚೆನ್ನಾಗಿದೆ..

  2. ಮನದ ಮಾತನ್ನು ಸೊಗಸಾಗಿ ಪೋಣಿಸಿದ್ದಿರಿ.. ಬರೆಯುತ್ತಿರಿ..

Leave a Reply

Back To Top