ಮೇ ದಿನದ ವಿಶೇಷ ಕವಿತೆ
ಶ್ರಮಜೀವಿ
ಡಾ. ನಿರ್ಮಲಾ ಬಟ್ಟಲ
ಇಂದು ಕಾರ್ಮಿಕರ ದಿನ
ಇಲ್ಲೊಬ್ಬ ಮಹಾನ್ ಶ್ರಮಜೀವಿಯನ್ನು
ಸ್ಮರಿಸಲೇಬೇಕು….
ಗಂಟೆಗಳ ಲೆಕ್ಕಾಚಾರಕ್ಕೆ ದುಡಿಯುವುದಿಲ್ಲ
ತಿಂಗಳು ತಿಂಗಳು ಸಂಬಳಕ್ಕೆ
ಆಸೆ ಪಡುವುದಿಲ್ಲ
ಬಿಡುವಂತೂ ಬಯಸುವುದೇಯಿಲ್ಲ
ದುಡುಮೆಯನ್ನಾರು ಗೌರವಿಸುವುದಿಲ್ಲ ಬೆವರುಸುರಿಸಿ ರಕ್ತಬಸಿದರುಶ್ರಮಿಕಳಲ್ಲ
ಉಸಿರಿರುವರೆಗೆ ದುಡಿಯುವ
ಅವಳಿಗೆ ನಿವೃತ್ತಿಯಿಲ್ಲ
ಜೀವಕ್ಕೆ ಜೀವ ಕೊಟ್ಟು ವಂಶಬೆಳೆಸುವಳು
ಹಸಿವು ಮುಚ್ಚಿಟ್ಟು ಊಟ ಬಡಿಸುವಳು
ಹೃದಯ ಬಿಚ್ಚಿಟ್ಟು ಪ್ರೀತಿ ಕೊಡುವವಳು ನಿದ್ದೆಗೆಟ್ಟು ಕುಟುಂಬದ ಸವಾಲು ಗಳನ್ನು ಎದುರಿಸುವವಳು
ತನ್ನವರೆಲ್ಲರಿಗಾಗಿ ಮಳೆಹುಳುವಿನಂತೆ ದುಡಿಯುವ ಮಹಿಳೆ……..
ಅವಳೆ ನಿಮ್ಮ ಮನೆಯ
ನಿಮ್ಮ ತಾಯಿ,
ಹೆಂಡತಿ ,
ಮಗಳು….. ಅಲ್ಲವೇ…?
ಶ್ರಮಜೀವಿ. ಹೆಸರಿಗೆ ತಕ್ಕಂತೆ ದುಡಿತ ಮೇಲೆ ನೂರಾರು ಸವಾಲು ಗಳ ಹೊಡೆತ ಎದೆಗುಂದದೆ ದುಡಿಯುತ್ತಿರುವಳು ಅನವರತ. ಆ ಹೆಣ್ಣಿಗೆ ಮನುಕುಲವೇ ಋಣಿಯಾಗಿರಬೇಕು.ಚೆಂದದ ಕವನ.ಧನ್ಯವಾದಗಳು ಮೇಡಂ.
Thank you very much for your response