ಕಾವ್ಯಸಂಗಾತಿ
ಮೇ ದಿನದ ವಿಶೇಷ ಗಝಲ್
ಅಮೃತಾ ಉಮೇಶ್ ಶೆಟ್ಟಿ
ಹಸಿದ ಹೊಟ್ಟೆಯ ತುತ್ತಿಗಾಗಿ ಹಗಲಿರುಳು ದುಡಿಯುವವನು ಕಾರ್ಮಿಕ
ಹೊಸೆದ ಕನಸುಗಳ ಸಾಕಾರದ ನಡೆಗಾಗಿ ತುಡಿಯುವವನು ಕಾರ್ಮಿಕ
ಬಡತನದ ಬೇಗೆಲಿ ಬೇಯುತ ಸ್ತಬ್ದವಾಗಿ ನಿಂತಿರುವೆಯಾ ಹೇಳು
ಸಿರಿತನದ ಮಾಯಾ ಕುದುರೆಯ ಬಾಲ ಹಿಡಿಯುವವನು ಕಾರ್ಮಿಕ
ಗೂಡನು ಕಟ್ಟುವ ಆಸೆಲಿ ಸಾಲದ ಮೂಟೆಯ ಹೊರುವೆಯಾ
ಕೇಡನು ಬಯಸದೆ ಸತ್ಯದಿ ನಿತ್ಯವು ಮಿಡಿಯುವವನು ಕಾರ್ಮಿಕ
ತೋಳ ಬಲದಲಿ ಕೂಳ ಗಳಿಸುವ ಸ್ವಾಭಿಮಾನದ ಮೂರುತಿ
ಬಾಳ ಕಡಲಲಿ ಆಸೆ ಅಲೆಗಳಿಗೆ ಜಡಿಯುವವನು ಕಾರ್ಮಿಕ
ಬೆವರ ಹನಿಯಲಿ ಬರೆದ ಹೆಸರನು ಅಮ್ಮಿ ಓದುವಳು
ಸಾವಿರ ಸಮಸ್ಯೆಗಳ ಶಿರವ ಹಿಡಿದು ಕಡಿಯುವವನು ಕಾರ್ಮಿಕ
ಅದ್ಭುತವಾದ ಕವಿತೆ
Super
ಕಾರ್ಮಿಕರ ಸಮಸ್ಯೆಗಳನ್ನು ಚಿತ್ರಣ ಚೆನ್ನಾಗಿದೆ ಮೇಡಂ ಧನ್ಯವಾದಗಳು ತಮಗೆ.