ಗಜಲ್
ರತ್ನರಾಯಮಲ್ಲ
ಮಲ್ಲಿಗೆಯಂತೆ ಅರಳಿರುವೆ ನನ್ನೆದೆಯ ತೋಟದಲ್ಲಿ
ಸಕ್ಕರೆಯಂತೆ ಬೆರೆತಿರುವೆ ನನ್ನದೆಯ ಹಾಲಿನಲ್ಲಿ
ಜೀವನದಲ್ಲಿ ನಗುತಿರುವೆ ನನ್ನವರ ಶಾಂತಿಗಾಗಿ
ದೀಪದಂತೆ ಹರಡಿರುವೆ ನನ್ನದೆಯ ಕೋಣೆಯಲ್ಲಿ
ಸೋಜಿಗದಂತೆ ಚಲಿಸುತಿರು ಎನ್ನುವುದು ಭೋಗದಾಸೆ
ವಾಯುವಿನಂತೆ ಜೊತೆಯಲಿರು ನನ್ನೆದೆಯ ಸೃಷ್ಟಿಯಲ್ಲಿ
ಚಂದಿರನಂತೆ ಬೆಳಗುತಿರು ಎನ್ನುವರು ಕತ್ತಲಲ್ಲಿ
ನೇಸರನಂತೆ ಹೊಳೆಯುತಿರು ನನ್ನದೆಯ ಬಾನಿನಲ್ಲಿ
ಪಾಪಸಕಳ್ಳಿ ಸರಪಳಿಯು ಕಾಡುತಿದೆ ‘ಮಲ್ಲಿ’ಯನ್ನು
ಭಾಮಿನಿಯಂತೆ ಬದುಕುತಿರು ನನ್ನೆದೆಯ ಜಾತ್ರೆಯಲ್ಲಿ
ತುಂಬು ಹೃದಯದ ಧನ್ಯವಾದಗಳು ಸರ್ ಜೀ