ಕಾವ್ಯಯಾನ
ಈ ಕೊರೊನಾ ಕಾಲದಲಿ
ಬಿ.ಶ್ರೀನಿವಾಸ
ಸಾಲು ಸಾಲು ಹೊರಟಿವೆ
ದೂರದೂರಿಗೆ
ನಿಲ್ಲುವುದಿಲ್ಲ
ಬೇರುಗಳ ಹುಡುಕುವ ಪಯಣ
ಮಣ್ಣು ಸೇರುವ ತನಕ
ಒದ್ದೆಯಾಗಿವೆ
ಸಾಲಿಡಿದು ಹೊಂಟ
ಇರುವೆಗಳ ಕಣ್ಣೂ
ಮಾಧ್ಯಮದವನೊಬ್ಬ ಅರಚುತ್ತಲೇ ಇದ್ದಾನೆ
“ನಿರಾಶ್ರಿತರೇಕೆ ಸಾಯಲು ಬರ್ತಾರೆ?”
ಭೂಮಿ ಕಂಪಿಸುತಿದೆ
ಮಣ್ಣು ಸೇರುವ ಜೀವಗಳ ತವಕಕೆ!
ಮನುಷ್ಯರ ನಿಖರ ಸಂಖ್ಯೆ ತಿಳಿಸಿದ ಈ ಕಾಲಕೆ
“ಈ ಕೊರೋನಾ ಕಾಲದಲ್ಲಿ ” ಕವಿತೆ ಈಗಿನ ದುಸ್ಥಿತಿಯನ್ನು ಎತ್ತಿ ಹಿಡಿದಿದೆ.. ಕರಾಳ ಮುಖಗಳನ್ನು ತೋರಿಸುವಂತಿದೆ… ಕವಿ ಬಿ.ಶ್ರೀನಿವಾಸ ರವರು ಮಗ್ಗಲುಗಳನ್ಬು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ…
ಸರ್
ಕರೊನ ಕಾಲಘಟ್ಟದಲ್ಲಿ
ಅನುಭವಿಸಿದ ನೋವು
ಯಾತನೆಗಳು ತುಂಬಾ
ಮಾರ್ಮಿಕವಾಗಿ ಮೂಡಿಬಂದಿದೆ ಸರ್
ಕೊರೊನಾದ ಪರಿಣಾಮಗಳು, ಸಾವಿನ ಸಮಯದಲ್ಲಾದ ತವರಿನ ನೆನಪುಗಳು, ಶೋಚನೀಯ ಬದುಕು ಮತ್ತೊಮ್ಮೆ ಕಣ್ಣ ಮುಂದೆ ಹಾದು ಹೋದಂತಾಯಿತು ಸರ್.