ಸಂಭವಾಮೀ ಯುಗೇ ಯುಗೇ

ಕಾವ್ಯಯಾನ

ಸಂಭವಾಮೀ ಯುಗೇ ಯುಗೇ

ನಾಗರತ್ನ ಎಂ ಜಿ

Why data will play a crucial role in fighting violence against women and  children during COVID-19

ಇಲ್ಲೂ ಒಬ್ಬಳು ನಿರ್ಭಯ
ಎಲ್ಲಿಯೂ ಸಿಗಲಾರದು
ಇವಳಿಗೆ ಅಭಯ
ಹೋದಲ್ಲೆಲ್ಲ ಜೊತೆಗೊಯ್ಯಲೇಬೇಕು
ಇವಳು ..ಭಯ !!

ಹೆಣ್ಣಿಗೊಬ್ಬ ಆರಕ್ಷಕ
ಇರಲು ಶಕ್ಯವಿಲ್ಲ
ಪ್ರಭುತ್ವವನ್ನು ದೂಷಿಸಿ
ಫಲವಿಲ್ಲ….

ತನ್ನ ತಾಯಿ ತನ್ನ ತಂಗಿ
ಮಾತ್ರ ಹೆಣ್ಣು…
ಬೇರೊಬ್ಬನ ತಂಗಿ
ಕಣ್ಣಿಗೆ ಹುಣ್ಣು
ಎನ್ನುವ ವಿಕೃತ ಮನಸ್ಥಿತಿ
ಬದಲಾಗದೆ ಸುಧಾರಿಸದು
ಈ ಶೋಚನೀಯ ಪರಿಸ್ಥಿತಿ

ಹೆಣ್ಣಿಗೆ ಮಾತ್ರ
ಎಚ್ಚರಿಕೆ ಅಗತ್ಯ
ಗಂಡಿಗ್ಯಾರು ಕೊಟ್ಟರು
ಅತ್ಯಾಚಾರದ ಸ್ವಾತಂತ್ರ್ಯ

ಹಿಂಸಿಸುವಾಗ ಹೆಣ್ಣನ್ನು
ಕುರುಡಾಗುವುದೇ ಕಣ್ಣು
ನೆನಪಾಗುವುದಿಲ್ಲವೇ ಆಗ
ನಿನ್ನ ತಾಯಿಯೂ ಒಂದು ಹೆಣ್ಣು

ತಾಲಿಬಾನಿಗಳ ಬೈಯ್ಯಲು
ನೂರು ನಾಲಿಗೆ ಇಲ್ಲಿ
ನಾವೇನು ಮಾಡುತ್ತಿದ್ದೇವೆ
ಹೆಣ್ಣನ್ನು ಪೂಜಿಸುವ ನೆಲದಲ್ಲಿ

ಆಗೊಬ್ಬ ದ್ರೌಪದಿ
ಮಹಾಭಾರತದಲ್ಲಿ
ರಕ್ತ ಬೀಜಾಸುರರಂತೆ
ದುಶ್ಶಾಸನರು ಕಲಿಯುಗದಲ್ಲಿ

ಆದರೆ…
ಕೃಷ್ಣನೇಕಿಲ್ಲ ಕಾಯಲು
ಈ ಮಣ್ಣಿನಲ್ಲಿ
ಅಕ್ಷಯವಾಗಲಿಲ್ಲವೇಕೆ ಮಾನ ಮುಚ್ಚಲು
ಬಟ್ಟೆ ಇಲ್ಲಿ

ಸಂಭವಾಮೀ ಯುಗೇ ಯುಗೇ
ಎಂದವನು ನೀನು
ಎಂದಿಗೆ ಬರುವೆ
ಹೊದಿಸಲು ಸೀರೆ ಇಲ್ಲಿ
*************

2 thoughts on “ಸಂಭವಾಮೀ ಯುಗೇ ಯುಗೇ

  1. It really reflects the pain of an Indian woman who still feels insecured even during celebration of 75th year of Indian Independence. Very pathetic state.
    I feel it is the result of illiteracy and unemployment and free excess to the vulnerable internet channels.
    Expression has come from the depth of the heart.

Leave a Reply

Back To Top