ಗಜಲ್

ಗಜಲ್

ಅಶ್ಫಾಕ್ ಪೀರಜಾದೆ

ಕೆಲವು ಮಿಲನಗಳೇ ಹೀಗೆ ಎಂದಿಗೂ ಮರೆಯಲಾಗದು
ಕೆಲವು ಅಗಲಿಕೆಗಳೇ ಹೀಗೆ ಎಂದಿಗೂ ಮರೆಯಲಾಗದು

ಬದಲಾಗುವ ಬದುಕಿನ ನಿಲ್ಧಾಣಗಳು ಒಪ್ಪಿಕೊಳ್ಳಲೇ ಬೇಕು
ಕಳೆದ್ಹೋದ ನೆಲೆಗಳೇ ಹೀಗೆ ಎಂದಿಗೂ ಮರೆಯಲಾಗದು

ಹೃದಯಕೆ ಅದಾವ ಅಗೋಚರ ಭಾವಗಳ ಹಿತಸ್ಪರ್ಶವೋ
ಬಚ್ಚಿಟ್ಟ ಬಂಧಗಳೇ ಹೀಗೆ ಎಂದಿಗೂ ಮರೆಯಲಾಗದು

ಅದೆಷ್ಟೋ ಹೂಗಳ ಬೀದಿಬದಿಯಲಿ ಜನಿಸಿ ಅಲ್ಲೇ ಉಸಿರು ಚೆಲ್ಲುತ್ತವೆ
ಹೂತಿಟ್ಟರು ನೆನಪುಗಳೇ ಹೀಗೆ ಎಂದಿಗೂ ಮರೆಯಲಾಗದು

ರಕ್ಕೆ ಬಲಿತ ಪಕ್ಷಿಗಳು ಎಂದಿಗೂ ಅಲೆಮಾರಿಗಳು ಪೀರ್
ಕೆಲ ಪಾರಿವಾಳಗೇ ಹೀಗೆ ಎಂದಿಗೂ ಮರೆಯಲಾಗದು

***********************

Leave a Reply

Back To Top