ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಯಾನ

ಇಂಚಗಲದ ಗೋಡೆ

ಶಂಕರಾನಂದ ಹೆಬ್ಬಾಳ

Impression Brick Wall 3D Wall Poster, Wallpaper, Wall Sticker Home Decor  Stickers Price in India - Buy Impression Brick Wall 3D Wall Poster,  Wallpaper, Wall Sticker Home Decor Stickers online at Flipkart.com

ಅವನ ನನ್ನ ನಡುವೆ
ಇಂಚಗಲದ ಎತ್ತರದ ಗೋಡೆ
ಸೀಮೆಂಟ,ಇಟ್ಟಿಗೆ,ಗಾರೆ
ಏನು ಇಲ್ಲ…
ಬರಿ ಒಣ ಜಂಭದ
ಪೊಳ್ಳುಗೋಡೆ…!

ಸಮಾನತೆ ಬಿಟ್ಟು
ಸ್ವಾರ್ಥದ ಕೂಪದಿ ಮುಳುಗಿ
ಬರಿ ಗೋಡೆ ಕಟ್ಟಿ ಮೆರೆದಿದ್ದೇವೆ
ಮನ ಮುರಿದಿದ್ದೇವೆ,,,?
ಜನರ ತೊರೆದಿದ್ದೇವೆ…?
ಏಕಾಂಗಿಯಾಗಿದ್ದೇವೆ…?
ಉಳಿದಿದ್ದು, ಬರಿ ಎತ್ತರದ
ಗೋಡೆ ನೋಡುವ ಭೀಬತ್ಸ
ಪ್ರಮೇಯವೊಂದೆ…!

ಶ್ವೇತ ಬಣ್ಣದ ಗೋಡೆ,
ಲೊಚಗುಟ್ಟುವ ಹಲ್ಲಿ,
ನನ್ನನ್ನೆ ದಿಟ್ಟಿಸಿ
ನೋಡುತ್ತಿದೆಯಿಲ್ಲಿ…!!

ಅಲ್ಲೊಂದು ಅಡಿಬರಹ
ಜೀವನ ಮೂರುದಿನ
“ಒಂದು ದಿನ ಬಂದು
ಒಂದು ದಿನ ನಿಂದು
ಒಂದು ದಿನ ಹೊರಡು”
ಸತ್ಯದ ನುಡಿ….
ಮೂಕನಾಗಿಸಿತು…!

ಗೋಡೆ ಒಡೆದೆ
ಅಂತರಂಗದ ಕದ ತೆರದೆ,
ಮತಪಂಥಗಳ ತೊರೆದು
ಸಮಾನತೆ ಸಾರುತ
ನೆಮ್ಮದಿ ಶಾಂತಿಯಿಂದ
ಬದುಕುತಿರುವೆ….!

****************************

About The Author

Leave a Reply

You cannot copy content of this page

Scroll to Top