ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಯಾನ

ಆತ್ಮ ಸಾಂಗತ್ಯ

ಪ್ರೊ. ರಾಜನಂದಾ ಘಾರ್ಗಿ

Couples Archives - Beatrice Hoffman

ಮೌನದ ನಂಟು ಬಿಡಿಸಿದ
ನಗೆಯ ಬುತ್ತಿ ನೀಡಿದ
ಜೀವಸೆಲೆಯ ತೋರಿದ
ಭಾವ ಕಾವ್ಯ ಸಂಗಾತಿ

ನಗುವ ತುಟಿಗಳ ಹಿಂದೆ
ದುಗುಡ ದುಮ್ಮಾನ ಕಂಡೆ
ಸಿಟ್ಟು ಸೆಡವುಗಳ ಕಾರಣ
ಪ್ರೀತಿ ಮಮತೆಗಳೆಂದರಿತೆ

ಮೌನದ ಹಿಂದಿರುವ ಮಾತು
ಭಾವ ಸಂಕೀರ್ಣತೆಯ ಆಳ
ಹಿಂಜರಿಕೆಗಳ ನೆರಳುಗಳರಸಿ
ಕಣ್ಣಿನ ಆಳದಲ್ಲಿಳಿದು ಹುಡುಕಿ

ಹೃದಯದಾಳದ ಕಪ್ಪೆ ಚಿಪ್ಪಿನಲ್ಲಿ
ನಾನರಿಯದ ನನ್ನ ಹುಡುಕಿ
ಭರವಸೆಯ ದೀಪ ಬೆಳಗಿ
ಭಾವ ತೆಪ್ಪದಲ್ಲಿ ಮೇಲೆರಿಸಿದೆ

ಯಾವ ಜನುಮದ ನಂಟು
ಅರಿಯದ ಭಾವ ಬೆಸುಗೆ
ನಡೆಸುತಿದೆ ನನ್ನ ನಿನ್ನ
ಆತ್ಮ ಸಂಗಾತ್ಯದೆಡಗೆ


About The Author

4 thoughts on “ಆತ್ಮ ಸಾಂಗತ್ಯ”

  1. Mamathashankar

    ಒಳಗನ್ನು ನೋಡುವ ಪ್ರಯತ್ನ…. ಚೆಂದ ಇದೆ ಮೇಡಂ ಅಭಿನಂದನೆಗಳು

Leave a Reply

You cannot copy content of this page

Scroll to Top