ಕಾವ್ಯಯಾನ
ಧರೆಯ ಮಳೆ
ಪ್ರೊ. ರಾಜನಂದಾ ಘಾರ್ಗಿ
ಭಾವನೆಗಳು ಹೊತ್ತಿ
ಉರಿಯುವ ಕಾವಿಗೆ
ಹೆಪ್ಪುಗಟ್ಟಿದ ಮನ
ಕರಗಿ ಆವಿಯಾಗಿ
ಮೇಲೆರುತ್ತ ಮೊಡಗಟ್ಟಿ
ಸವಿಮಾತಿನ ತಂಪಿಗೆ
ಕರಗಿ ನೀರಾಗುತ್ತ
ಕಣ್ಣುಗಳಿಂದ ಹರಿದು
ಮನವ ತೊಯಿಸಿದಂತೆ
ಸೂರ್ಯನ ಬಿಸಿಲಿಗೆ
ಕಾಯ್ದು ಆವಿಯಾಗುತ್ತ
ಮೇಲೆರಿದ ತೇವಾಂಶ
ಮೋಡವಾಗಿ ಘನಿಸಿ
ತಂಗಾಳಿಗೆ ತಣಿದು
ಧಾರೆಯಾಗಿ ಸುರಿಯುತ್ತ
ಉರಿಯುತ್ತರುವ ಧರೆಯ
ಒಡಲನು ತೋಯಿಸುತ್ತಿದೆ
ಮಡಿಲನು ತಂಪಾಗಿಸುತ್ತಿದೆ
ಮರಗಳ ಮೈ ತೋಯಿಸಿ
ಹಚ್ಚ ಹಸಿರಾಗಿಸುತ
ಸಾಗರಗಳ ಸವರುತ್ತ
ಅಲೆಗಳನ್ನು ಹುಟ್ಟಿಸುತ್ತ
ಸುರಿಯುತ್ತ ನದಿಗಳ ಸೇರಿ
ತೀರಗಳನ್ನು ಕೋಚ್ಚುತ್ತಿದೆ
ಬಿರುಗಾಳಿಯ ಜೊತೆಗೂಡಿ
ಗುಡುಗು ಮಿಂಚಿನೊಡನೆ
ವಿರಾಟ ರೂಪ ತೋರಿದೆ
ಸುರಿ ಮಳೆ ಜಡೆ ಮಳೆ
ಸಿಂಚನಗಳ ರೂಪದಲ್ಲಿ
ಧರೆಯ ಮೇಲೆ ನರ್ತಿಸಿದೆ
ನಿಮ್ಮ ಕವನದಲ್ಲಿ ಮಳೆಯ ರೂಪ ವಿವಿಧ ಸ್ಥರದಲ್ಲಿ ಮಿಂಚುತ್ತಿದೆ….
ಧನ್ಯವಾದಗಳು
ಧನ್ಯವಾದಗಳು ಸುಧಾ
Beautiful