ಕಾಗದದ ದೋಣಿ

ಕಾವ್ಯಯಾನ

ಕಾಗದದ ದೋಣಿ

ಶಾಂತಲಾ ಮಧು

ನೆನಪಿದೆಯ ಗೆಳೆಯ
ಕಾಗದದ ದೋಣಿ

ಮಳೆಬಿದ್ದು ಹನಿಯಡಗಿ
ಕೆನ್ನೀರ ಹೊಳೆ ಹರಿಯೆ
ನಾನು ನಿನ್ನೊಡನೋಡಿ
ಹೊಳೆಯ ಬಳಿಯಲಿ
ತೆೇಲಿ ಕಳಿಸಿದ ದೋಣಿ

ನೆನಪಿದೆಯ ಗೆಳೆಯ
ಕಾಗದದ ದೋಣಿ

ತಟ್ಟಿದೆವು ಚಪ್ಪಾಳೆ
ನಕ್ಕು ನಗುತಾ ಅಂದು
ತೇಲಿತದು ತೇಲಿತದು
ಒಂದು ಒದೊಂದೆಡೆ
ಗೊತ್ತಿಲ್ಲ ಗುರಿಇಲ್ಲ
ನೀರಸೆಳೆತದ ಕರೆಗೆ
ಗಾಳಿ ಹೊಡೆತದಕಡೆಗೆ

ನೆನಪಿದೆಯ ಗೆಳೆಯ
ಕಾಗದದ ದೋಣಿ
ಮೌನ ವಾದೆವು ನಾವು
ದೃಷ್ಟಿನಿಲುಕದೆ ಕೊನೆಗೆ
ಹೊತ್ತು ಹೊತ್ತು ಹೋಯಿತು

ನೆನಪಿದೆಯ ಗೆಳೆಯ
ಕಾಗದದ ದೋಣಿ

ದನಿ ಅಲ್ಲಿ ಗಾಳಿಯಲಿ
ದೋಣಿಮನದಾಳದ್ದು
ಕ್ಷಣ ಕ್ಷಣಕು ಹೊಸ ಬದುಕು
ನೆನದಲ್ಲಿ ನಿಲಲಾರೆ
ನಿಂತಲ್ಲಿ ನಿಟ್ಟುಸಿರು
ಕಾಗದದ ದೋಣಿ

ತಿಳಿಯ್ಯಾತು ತಿಳಿಯ್ಯಾತು
ಕೆನ್ನೀರು ತಿಳಿಯ್ಯಾತು
ಇಕ್ಕೆಡೆಯ ಮರಗಿಡಕೆ
ಕನ್ನಡಿ ತಾನ್ ಆಯ್ತು

ನಾನ್ ಆಯ್ತುನೀನ್ ಆಯ್ತು
ಕ್ಷಣ ಕ್ಷಣಕೊ ಬದಲಾಯ್ತು
ಬದುಕ ಬಣ್ಣಿಸುತ
ಕಾಗದದ ದೋಣಿ

ಭೂಮಿ ಆಕಾಶವ
ಒಂದಾಗಿಸಿ ಮತ್ತೆ
ಕಲ ಕಲ ಝಳ ಝಳ
ನವಿರಾಗಿ ನಯವಾಗಿ
ಚಿತ್ತಾರದ ನಡುವೆ
ಈ ಪುಟ್ಟ ದೋಣಿ
ಕಾಗದದ ದೋಣಿ

ಕ್ಷೀಣಿಸುತ ಕ್ಷೀಣಿಸುತ
ಕಾಗದದ ದೋಣಿ
ಕ್ಷಣ ಕ್ಷಣವು ಆಲಿಸುತ
ಮಳೆಯ ದನಿ
ದಿಟ್ಟಿಸಿತ ಹರಿವ ಹೊಳೆ
ನಿಶಬ್ಭ ದೆಡೆಗೆ

*******

One thought on “ಕಾಗದದ ದೋಣಿ

Leave a Reply

Back To Top