ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಏಕಾಂತ ಬಯಸಿ….

ಪುಷ್ಪಾ ಮಾಳ್ಕೊಪ್ಪ

Wood Anemone, Flower, Spring, Nature

ಕಾಡು ಮಲ್ಲಿಗೆಯೊಂದು
ಮೆಲ್ಲತಾ ಬಿರಿಯುತಿರೆ
ಕಿತ್ತು ಕಾಡದಿರದರ
ಪುಟ್ಟ ಹೃದಯದ ಗೂಡ

ಎಳೆಯ ರವಿ ಕಿರಣಗಳು
ಇಳಿದು ಮೈ ಸೋಕುತಿರೆ
ಹೊಳೆದು ತನ್ನಯ ಸೊಬಗ
ಹರುಷದಲಿ ಹಿಗ್ಗುತಿರೆ
ಇರಿದು ಕೊಲ್ಲದಿರದರ
ಬಿರಿವ ಸುಮಧುರ ಕ್ಷಣವ

ತಂಗಾಳಿಯಲಿ ತೇಲಿ
ಮನದುಂಬಿ ತೂಗುತಿರೆ
ಮಂಜು ಮುತ್ತಿನ ಸರದಿ
ಮನದುಂಬಿ ಚುಂಬಿಸಿರೆ
ಚಿವುಟಿ ಚೀರಿಸದಿರದರ
ಚೆಂದುಟಿಯ ಚೆಲುವ

ಅರಳಿದದರಂದಕೆ
ಇಳೆಯ ರಂಗೇರುತಿರೆ
ಸೂಸಿ ಸೌಗಂಧವಾ
ಏಕಾಂತ ಬಯಸುತಿರೆ
ಹಿಸುಕಿ ನೊಯಿಸದಿರದರ
ಸಂತಸದ ವಸಂತವ

ಆಪುಟ್ಟ ಹೃದಯಕೂ
ನೂರು ನೋವಿರುತಿರೆ
ಹೊರನೋಟದಲಿ ಮಾತ್ರ
ಅದರ ನಗುವಿರುತಿರೆ
ಅರಿತು ಕೊಲ್ಲುವಿರೇಕೆ
ಅದರ ಮನದಾಳದ ಭಾವ

*********************************

About The Author

Leave a Reply

You cannot copy content of this page

Scroll to Top