ಅಬಾಬಿ
ವಿಶಾಲಾ ಅಕ್ಕಿ


1.
ಅಭಿವ್ಯಕ್ತಿಯಲಿ ಸೋಲು ಅವಳಿಗೆ ಸ್ತ್ರೀ ಲಿಂಗವೇ ಇಲ್ಲಿ ಶಾಪವಾಗಿದೆ
ಅಸೆ ಆಕಾಂಕ್ಷೆಗಳಿಗಿಲ್ಲ ಲಿಂಗ ಬೇಧ
ಹೋರಾಟದಲಿ ಸಾಗಲಿ
ವಿಶಾಲಾ
ಶ್ರಮವಿರದೆ ಪಡೆಯಲಾಗದು ನ್ಯಾಯ ಸಲೀಸಾಗಿ
2.
ನಮ್ಮ ಇಹವು ಸತ್ಯ
ಬದುಕಲಿರಲಿ ಶ್ರಮ ನಿತ್ಯ
ಸೆಣೆಸಾಟದಲಿ ಸಂಬಂಧಗಳು ಹರಿದಾವು
ವಿಶಾಲಾ
ಜೋಪಾನ ನಾಜೂಕಲಿ ಹಿಡಿತವಿರಲಿ
3.
ಬಡತನ ಬಡವನ ಬದುಕಾಗಿರೆ
ಸಂಸಾರ ಹೊರೆವ ನೊಗವಾಗಿ ಭಾರವಾಗಿದೆ
ಶ್ರಮದಲಿ ಸಮಯೋಚಿತ ಪ್ರಯತ್ನ
ವಿಶಾಲಾ
ಹೊರಬರಲು ಸಿರಿತನ ಸೋಕವುದು ಸತ್ಯ
4.
ಸುಂದರ ಸಂಜೆ ಸುಂಟರ ಗಾಳಿ ಹಾವಳಿ
ಮೋಸದ ಪ್ರೀತಿಯಲಿ ಸುಳಿಗೆ ಸಿಕ್ಕ ಮೀನಾಗಿದೆ
ಪ್ರಕೃತಿ ಮುನಿಸದೆ ಸುಮ್ಮನಿರಲು ಸಾಧ್ಯವೇ
ವಿಶಾಲಾ
ಶಮನಿಸು ನಿನ್ನ ಮನಸ ಮಾನಸವನು ಬಿಗಿದಪ್ಪುತ
5
ಹುಚ್ಚೆದ್ದ ನದಿಯು ನರ್ತನವಾಡಿತ್ತು
ಹಳ್ಳ ಕೊಳ್ಳ ಝರಿಯನೆಲ್ಲ ಏಕ ಮಾಡಿತ್ತು
ಮನೆಮಠಗಳೆನ್ನದೆ ನೆಲ ಸಮವಾಗಿಸಿತ್ತು
ವಿಶಾಲಾ
ಶಾಂತ ಸಾಗರಕ್ಕೂ ರೌದ್ರಾವತಾರ ತೋರೋ ಶಕ್ತಿಯುಂಟು
*************************
ಎಲ್ಲಾ ಅಬಾಬಿಗಳು ಚೆನ್ನಾಗಿವೆ.
ಧನ್ಯವಾದಗಳು ಸರ್
ತುಂಬಾ ಅದ್ಭುತವಾಗಿವೆ ಎಲ್ಲವೂ ವಿಶಾಲ.. ಮನದಾಳದ ಮಾತುಗಳು ಮುದ ನೀಡುತ್ತವೆ
ಧನ್ಯವಾದಗಳು ಚಿನ್ನಿ ಅಕ್ಕ
Very beautiful
Thank you very much sir
ಅರ್ಥಗರ್ಭಿತ ಅಬಾಬಿಗಳು ಮೇಡಂ..
ಈಶ್ವರ ಜಿ.ಸಂಪಗಾವಿ. ಧಾರವಾಡ.