ಕವಿತೆ
ಕುಸುಮ
ಅಕ್ಷತಾ ಜಗದೀಶ.ಪ
ಮಂಜಿನ ಹನಿಗಳ ಸ್ಪರ್ಶಿಸಿ
ಮುಂಜಾನೆ ಅರಳುವ ಕುಸುಮ
ಅರಿಯದು ಎಂದಿಗೂ ತನ್ನ ಪಯಣ
ಎತ್ತ ಸಾಗುವುದೆಂದು….
ಭಗವಂತನ ಶಿರವೇರಿ ನಲಿವೆನೋ..
ನಾರಿಯ ಮುಡಿಯೇರಿ ಮೆರೆವೆನೋ..
ನವ ಜೋಡಿಗಳ ಕೊರಳ ಹಾರವಾಗುವೆನೋ….
ಅಲಂಕಾರರಕ್ಕೆ ಇರಿಸುವ ಪುಪ್ಷವಾಗಿ
ಬಿಗುವೆನೋ…
ಇಲ್ಲವೇ…..
ಜೀವವಿರದ ಶರೀರದ ಮೇಲೆ ಹೊದಿಕೆಯಾಗಿ ಬಾಡುವೆನೋ….
ಪಯಣ ಅರಿಯದ ಕುಸುಮರಾಶಿ
ಚಿಂತಿಸದು ಎಂದಿಗೂ ಸೇರುವ ಪಥ
ಕಶ್ಮಲವಿರದ ಪುಷ್ಪ…
ಪಯಣದುದ್ದಕ್ಕೂ ಭೇದ ತೋರದೆ ಸಾಗುವ ಹೂ…..
ಸಾರ್ಥಕತೆಯ ಮೆರೆಯುವುದು..
*********************
ಕಲ್ಮಶವಿರದ ಪುಷ್ಪ ಎಂದಾಗಬೇಕಿತ್ತು.ಕವಿತೆ ಚೆನ್ನಾಗಿದೆ.