ಕವಿತೆ
ಹೇಳು ಕಾರಣ….
ಡಾ. ನಿರ್ಮಲಾ ಬಟ್ಟಲ
ಮನದಂಗಳದಿ ಬಂದು
ಕಾರಣವಿಲ್ಲದೆ
ಮುನಿಸಿಕೊಂಡ ಹೋಗುವ
ಗೆಳೆಯ ಒಮ್ಮೆಯಾದರೂ
ಹೇಳು ನೀ ಮೌನಕೆ ಕಾರಣ…..!
ಆಷಾಢದ ಸೂಂಯ್ ಗೂಡುತ
ಬೀಸುವ ಗಾಳಿಯ ಕೇಳಿಗೆ
ತತ್ತರಿಸಿದ ಲತೆಯಂತೆ
ತನು ನಡುಗಿದರೆ
ಮನ ಮುದುಡಿದೆ….!
ಬಾನಲಿ ಮೊಡಗಳ
ಚೆಲ್ಲಾಟದ ನಡುವೆ
ನನ್ನ ಭಾವನೆಗಳನೆಲ್ಲ
ಚೆಲ್ಲಾಪಿಲ್ಲಿಮಾಡಿ
ಸರಿದುಹೋಗುವುದು ಸರಿಯೆ….!
ನೀನೆನೋ ಮೋಡಗಳ
ನಡುವೆ ಏನು
ಅರಿಯದವನಂತೆ ಸರಿದು ಬಿಡುವೆ
ಬೆಳದಿಂಗಳ ರಾತ್ರಿಗಾಗಿ ನಾ ಪರಿತಪಿಸುವೆ….!
ಆಷಾಢದ ಮುನಿಸಿಗೆ
ಶ್ರಾವಣದ ಸೋನೆ ರಮಿಸಲು
ಝರಿಯಾಗಿ ಹರಿದು
ಹಸಿರಾಗಿ ಉಕ್ಕಲು ನಾ
ಕಾಯುತಿರುವೆ…..!
ಮರೆತು ಮುನಿಸು
ನೀ ಬರುವೆಯಾ….?
ಬರುವುದಾದರೆ ನೀ
ಚೇತನವಾಗಿ ಬಾ
ನಿತ್ಯನೂತನ ಆತ್ಮಚೆಲುವಾಗಿ ಬಾ….!
********************
Super mam
Superrrrrrr mam
ಚೆನ್ನಾಗಿದೆ
ಅರ್ಥಗರ್ಭಿತ ವಾಗಿದೆ ಮೇಡಂ…
ಒಳ್ಳೆಯ ಕವಿತೆ ನಿರ್ಮಲಾ…..
ಅರ್ಥಪೂರ್ಣ ಕವನ