ಕವಿತೆ
ಮಳೆಗಾಲದ ರಾತ್ರಿ
ಅಬ್ಳಿ,ಹೆಗಡೆ
ಹಳೆನೆನಪ ಗೋರಿಯ ಮೇಲೆ
ಕುಳಿತ,ಹೊಸ ಮನಸುಗಳ
ಬಿಕ್ಕಳಿಕೆ ಕೇಳಿಯೂ
ಕೇಳಿಸದಂತಿದೆ ಮಾತು
ಕೋರಿಕೆ ಒಂದೇ ಸವನೆ ಸುರಿವ
ಸಣ್ಣ,ತಣ್ಣಗಿನ ಮಳೆಯ
“ಪಟ,ಪಟ”ಸದ್ದಿನೊಟ್ಟಿಗೆ
ಜೀರುಂಡೆಗಳ
“ಜೀರ್,ಜೀರ್”ಸದ್ದು
ಅತ್ರಪ್ತ ಆತ್ಮಗಳ ನರಳು
ಹೊಟ್ಟೆಯೊಳಗೆ
ಸಣ್ಣಗೆ ನಡುಕ,ಬೇಸರಕೂಡಾ.
ಹೊದ್ದ ಕತ್ತಲ ಕಂಬಳಿಯೊಳಗೆ
ಕಿರುಬೆವರು ಜ್ವರ ಬಿಟ್ಟಂತೆ,
ಬೋರಲಾಗಿ ಮಲಗಿದಂತೆ,
ಭೂಮಿ ಆಕಳಿಸಿದಂತೆ,ಇನ್ನೂ
ಏನೇನೋ ಹಳವಂಡಗಳು,
ನಿಶ್ಚಲ,ಘಾಢ,ನಿಶ್ಚಿಂತ ಸುಖನಿದ್ದೆ
ಸಧ್ಯಕ್ಕಿರುವ ಸವಾಲು
ಸುಂದರ,ಮಳೆಗಾಲದ,ನಗುಹಗಲು.
**************************
ತುಂಬಾ ಚೆನ್ನಾಗಿದೆ ಸರ್