ವಾಂಛಲ್ಯ

ಕವಿತೆ

ವಾಂಛಲ್ಯ

ಶಂಕರಾನಂದ ಹೆಬ್ಬಾಳ

ಸ್ತಬ್ದ ನೀಲಿಯ ಬಾಂದಳದಿ
ನಿನ್ನ ನೆನಪಿನ ತರಂಗಗಳು,
ಮೆಲ್ಲಗೆ ಸುಳಿಯುತ್ತಿವೆ,
ಉನ್ಮೇಷದಲಿ ನೋಡಿದೆ,…!
ಅನಂಗಳಾದ ಪ್ರೇಯಸಿಯ
ಭಾವ ಛಾಯೆಯದು…!!

ಎದೆಯ ಹೊನಲಿಂದು
ಉನ್ಮೀಲನಗೊಂಡು,
ಹೃನ್ಮನವ ತಣಿಸುತ್ತ,
ಅಮೋದದ ಚಣದಲ್ಲಿದೆ..!!

ಒಲವ ಪರಿಷೆಯಲಿ
ಮಿಂದೆದ್ದ ಅನುಭವ,
ಉನ್ಮಾದ ತರುತಿರುವ
ಪ್ರೇಮಸುಳಿಗಾಳಿ,
ತನ್ನೆಡೆಗೆ ಸೆಳೆಯುತ್ತಿದೆಯಲ್ಲ…!!

ಸುಪ್ರಭಾತದ ಗಾನ
ಕಂಕರಿಯ ವಾದ್ಯದ ಸದ್ದು,
ಕಿವಿಗಡಚಿಕ್ಕುವಲಿ,
ಅವಳ ಗೆಜ್ಜೆಯ ನಾದ,
ಹೃದಯದಲಿ ರಿಂಗಣಿಸುತ್ತಿದೆ…!!

ಉತ್ಕಟದ ವಾಂಛಲ್ಯವು
ತಾಳಮೇಳವಿಲ್ಲದೆ,ಏರುತ್ತಿದೆ
ಕದಿರಲ್ಲಿ ಬಿಂಬ ಪ್ರಜ್ವಲಿಸಿ
ಧಾವಂತದಲಿ ಧಾವಿಸಿದೆ…!!

ಅಭಿಪ್ಸೆಗಳಿಗೆ ರೆಕ್ಕೆಕಟ್ಟಿ
ಹಾರಿಸಿದೆ ಬಾನಲ್ಲಿ,
ನಿನ್ನ ಪ್ರೇಮ ಪಥದಲ್ಲಿ
ಅಧ್ವಗನಾಗಿ ಚರಿಸುತ್ತ,
ಯೋಗಿಯಂತೆ ಸಾಗುತ್ತಿದ್ದೇನೆ..!!

**********************

One thought on “ವಾಂಛಲ್ಯ

Leave a Reply

Back To Top