ಕವಿತೆ
ಒಲವ ತಾತ್ಸಾರ
ಅಭಿಜ್ಞಾ ಪಿ ಎಮ್ ಗೌಡ
ಉನ್ಮೇಷವಾಗುತಿದೆ….
ಉತ್ಕ್ರುಷ್ಟ ಒಲವಿನೊಳಗೆ ಅದಟು ,
ಅದಮ್ಯತೆ ,ಅಭಿಧೆಗಳು
ಅಪರೂಪದ ಉತ್ತುಂಗದಲಿ
ನೆಲೆಸಿರುವುದ ಕಂಡು..!
ಉದಧಿಯ ಆಳ , ಮುಗಿಲ
ವಿಸ್ತಾರಕ್ಕಿಂತಲು ದುಪ್ಪಟ
ನಿನ್ನೆದೆಯ ಅಂಗಳ..!
ಆದರೂ ಅದ್ಯಾಕೋ.! ಏನೋ.!
ನನ್ನೊಳಗಿನ ಉತ್ಕಲಿಕೆಗಳೆಲ್ಲಾ
ಉನ್ಮೀಳಿತಗೊಳ್ಳದೆ
ಉಸಿಕದೊಳಗೆ ಮನೆಮಾಡಿವೆ
ನಿನ್ನ ತಾತ್ಸಾರತೆಗೆ ಬೇಸತ್ತು….
ನಿನ್ನೊಲವು ನಿತ್ಯ ದೂರಾದಂತೆ
ನಸುಕಿನ ಭಾಸ್ಕರನ ಉಷೆ ,
“ಸಂಜೆಯ ಕೆಂಬಾರ”
ಶರಧಿಯ ಭಾವದಲೆಗಳು ,
ಮಾಮರದ ಚಿಗುರೆಲೆಯೆಲ್ಲವೂ
ಮಧುವಿಲ್ಲದ ಖಾಲಿ ಜೇನ್ಗೂಡಿನಂತೆ
ಭಣಗುಡುತಿವೆ….
ಉತ್ಕರ್ಷದ ಆಪ್ತತೆಯ ಭಾವ ,
ಮೊದಲ ಪ್ರೇಮ ಚುಂಬನದ ತುಣುಕುಗಳು ,ನೀನಾಡಿದ
ಮಧುರ ನುಡಿಗಳ ಝೇಂಕಾರಗಳೆಲ್ಲವೂ
ನನ್ನೆದೆಯಲಿ ಪ್ರತಿಕ್ಷಣವೂ
ಒಡ್ಡೋಲಗವನ್ನೇರ್ಪಡಿಸುತಿವೆ….
ಅಗಣಿತ ಸಾರ ಸತ್ವವಿರುವ
ನನ್ನೆದೆಯ ಒಲವಲ್ಲೆ ತತ್ವಾರ
ಹುಡುಕಿದ್ದು ತಪ್ಪಲ್ಲವೆ.?
ನನ್ನ ಅಮಿತ ,ಅನನ್ಯ ,
ಅಪೂರ್ವವಾದ ಪ್ರೀತಿಯನ್ನೆ
ಅಭಿಧ್ಯೆತೆಗೆ ಒಳಪಡಿಸಿದ್ದು
ತಪ್ಪಲ್ಲವೇ.?
ಆಸ್ಥೆಯೊಡಲಲಿ ಮನೆಕಟ್ಟುವ
ಮೊದಲೆ ಪ್ರೀತಿಸೌಧ
ಉರುಳಿಸಿದ್ದು ಅದೆಷ್ಟು ಸರಿ..?
ನನ್ನೆಲ್ಲ ಅಭೀಪ್ಸೆಗಳು ನುಚ್ಚುನೂರಾಗಿ
ಅನಾಥ ಹೆಣದಂತೆ ಚೀತ್ಕರಿಸುತಿವೆಯಲ್ಲ..
ಪ್ರೀತಿಕಿಚ್ಚನು ಹಚ್ಚಿ ನಿನಾದವಿಲ್ಲದ
ಗಾನದಂತಾದರೇನು ಫಲ.?
ಧಮನಿಧಮನಿಯಲು ನಿನ್ನೊಲವ
ಜ್ಯೋತಿ ಉರಿಯುತಿರುವಾಗ
ಉದಾಸೀನತೆಯ ಎಣ್ಣೆ ಸುರಿದರೆ
ಒಲವದೀಪ್ತಿ ಪ್ರಜ್ವಲಿಸುವುದೆ.?
ಹೊಡೆದ ಭಾವಗಳ ಹೊಸೆವವರಾರು.?
ನೊಂದ ಮನಕೆ ಸಾಂತ್ವಾನ
ನೀಡುವವರಾರು.?
ದೂರತೀರಯಾನದ ವಾಂಛಲ್ಯಕ್ಕಾದರು
ಉನ್ಮೇಷವಾಗಬೇಕಿತ್ತು.!
ನೊಂದು ಬೆಂದ ಮನವೀಗ ಏಕಾಂತದಿ
ಅಧ್ವಗನಾಗಿ ಹೊರಟು ನಿಂತಿದೆ……
************************
Chennagi bareyuttira
ಅನನ್ಯ , ಅಮೋಘ , ಅನುಪಮ ಕವಿತಾ ಶೈಲಿ