ಕವಿತೆ
ಬಿಗುಮಾನ
ಡಾ. ನಿರ್ಮಲಾ ಬಟ್ಟಲ
ಬಿಗಿ ಮೌನದ
ಪರದೆಯೊಳಗಿಂದ
ಇಣುಕಿದ್ದೇನೆ ಹಲವುಬಾರಿ….!
ನಿನ್ನ ಸಂದೇಶ ಕರೆ
ಬರುವುದೆಂದು
ದಾರಿನೋಡುತ್ತ….!
ಮನದ ತುಂಬಾ ತುಂಬಿದ
ಶಬ್ದ ಕಲವರವಗಳಿಗಿಗ
ಅಸಹನೀಯ ಮೌನ….!
ಮುರಿದು ಬಿಡಲೆ
ನಾನೆ ಒಂದು ಹೆಜ್ಜೆ
ಮುಂದೆ ಹೋಗಿ…..!
ಮತ್ತದೆ…. ಶಬ್ದ ಕಲಹ
ನನ್ನ ನಿನ್ನ ಕಥೆ ಕವನ
ಭಾವ ಹೊಳೆ ಪ್ರೀತಿ ಮಳೆ
ತೇಲದ ಮುಳುಗದ ಹಾಯಿದೋಣಿ
ನೆನೆಯದೆ ಮರೆಯದೆ
ಗೊಂದಲ…..!
ಇರಲಿ ಬಿಡು
ನನ್ನ ನಿನ್ನ ಮಾತುಗಳೆಲ್ಲ
ಮೌನದ ಚಿಪ್ಪೊಳಗೆ….!
ತುಸು ಗಟ್ಟಿ ಯಾಗಿ
ಮಂಥನದ ಪತದೊಳಗೆ
ಅರಿವಾಗಿ ಅರಳಲಿ….!
ಇನ್ನೆನು ಸುರಿಯಲಿದೆ
ಸ್ವಾತಿ ಮಳೆ
ನಿಶ್ಯಬ್ದವ ಸೀಳಿ
ಚಟಪಟನೆ ಅರಳಂತೆ
ಮುತ್ತಾಗುವ ಹೊತ್ತು
ತುಸು ಕಾಯೋಣ….!
********************
ಕವಿತೆ ಚೆಂದದ ಭಾವ….ಇಷ್ಟವಾಯ್ತು ನಿರ್ಮಲಾ….
More meaningful lines
ಸುಂದರವಾದ ಕವಿತೆ ! ಅಂತರಂಗದ ತುಮುಲವನ್ನು ನಿಃಶಬ್ದ ಮೌನದ ಚಿಪ್ಪಿನಲ್ಲಿ ಕಟ್ಟಿ ಹಾಕುವ ಭಾವ ಸುಂದರವಾಗಿ ಮೂಡಿ ಬಂದಿದೆ ! ಅಸಹನೀಯ ಶಬ್ದಗಳ ” ಕಲರವ ಗಳಿಗೆ” ಬಿಗಿದ ತುಟಿಗಳ ನಡುವೆ ಬಂಧಿಸಿಟ್ಟು ಮಂಥನದ ಅರಿವಿನ ” ಪಥ ” ದೊಳಗೆ ಅರಳಿ ಹೂವಾಗುವ ಅಭಿವ್ಯಕ್ತಿ ” ಬಿಗುಮಾನ” ದ ಶೀರ್ಷಿಕೆಗೆ ಸಮಂಜಸವಾಗಿದೆ !

ಭಾವ ತುಂಬಿದ ಕವನ ಮನ ತಟ್ಟುತ್ತದೆ .
ಮಹಾನಂದಾ .
ಚಂದದ ಮನತಟ್ಟುವ ಪದಗುಚ್ಛ ಗಳ ತೋರಣ..ಬಹು ಸುಂದರ..ಮೇಡಂ…