ಬದುಕು

ಕವಿತೆ

ಬದುಕು

ಶಾಲಿನಿ ಕೆಮ್ಮಣ್ಣು

Pink Easter Bunny Egg

ಬದುಕೊಂದು ಬಣ್ಣದ ಚಿತ್ರ
ಅಭಿನಯಿಸಲು ವಿಧ ವಿಧ ಪಾತ್ರ

ಅರಳಿದರದು ಸುಂದರ ಕುಸುಮ
ಜೊತೆಗೆ ಮುಳ್ಳಿನ ಸಮಾಗಮ

ಬರೆದರೆ ಒಂದು ಅದ್ಭುತ ಕವನ
ಅನುಭವಿಸಲು ಹಾಯಾದ ಜೀವನ

ಹಾಡಲು ಅದು ಸುಮಧುರ ಗಾನ
ಆಲಿಸಲು ಬಗೆ ಬಗೆ ತನನ

ಈಜಲು ವಿಶಾಲ ಅನುಭವ ಸಾಗರ
ಧುಮುಕಿದರೆ ಕಾಣದು ಮುಗಿಯದ ತೀರ

ಧರಿಸಲು ಕೋಮಲ ಪ್ರೀತಿಯ ಹಾರ
ಆಗುವೆ ನೀ ಗೆಲುವಿನ ಸರದಾರ

ಬಿಚ್ಚಿಡಲು ನೆನಪಿನ ಬುತ್ತಿ
ಸವಿಯುವೆ ಸಿಹಿಯ ಸಂತೃಪ್ತಿ

ನಿನ್ನೆಯ ನೋವನು ಮರೆಯುತ
ಇಂದಿನ ಸುಖವನ್ನು ಸವಿಯುತ
ಬಂದ ಹಾಗೆ ಸ್ವೀಕರಿಸುತ್ತ ಬದುಕಲು
ಜೀವನ ಸುಖ ಸೋಪಾನ ಜೇನಿನ ಪಾನ

**************************

One thought on “ಬದುಕು

Leave a Reply

Back To Top