ಕವಿತೆ
ಕಾಡುವ ಪ್ರಶ್ನೆ
ಅರುಣಾ ನರೇಂದ್ರ
ನನ್ನೊಳಗೆ
ನಿನ್ನ ಬಗೆಗಿನ ಭಾವಗಳು
ಅದೆಷ್ಟೊ…
ಒಮ್ಮೊಮ್ಮೆ
ಜೇನುನೊಣಗಳಂತೆ
ಮುತ್ತಿ ಗೂಡುಕಟ್ಟಿ
ಮಧುರಾನುಭೂತಿ
ನೀಡುತ್ತವೆ
ಮತ್ತೊಮ್ಮೆ
ಕಟ್ಟಿಗೆಯ ಹುಳು
ರಂದ್ರ ಕೊರೆಯುವಂತೆ
ಎದೆಗೆ ಗಾಯಮಾಡಿ
ಬಿಡುತ್ತವೆ
ಮೊಗದೊಮ್ಮೆ
ಸಾಗರದಿ ಅಲೆಗಳೆದ್ದು ಅಲ್ಲಿಯೇ ಲೀನವಾಗುವಂತೆ
ಮೈಮನ ಆವರಿಸಿ
ಸುಡುತ್ತವೆ
ನೀನು ಮಾತ್ರ
ನಿರಾಳ ಹೇಗೆ?
ಇಂತೀ ಹಲವಂದದಲಿ
ನಿನ್ನ ಪ್ರತಿ ಹೆಜ್ಜೆ
ನನಗೆ ಪ್ರಶ್ನೆಯಾಗಿ
ಕಾಡುತ್ತವೆ
****************
ಅರುಣಾ ಕವಿತೆ ಚನ್ನಾಗಿದೆ