ಹೀಗಾದಾಗ

ಕವಿತೆ

ಹೀಗಾದಾಗ

ಎಂ. ಆರ್. ಅನಸೂಯ

a person drowns underwater

ಅರ್ಥ ಕಳೆದುಕೊಂಡಾಗ ಮಾತುಗಳು
ಬೇಕೆನಿಸುವುದು ಮೌನ
ನಂಬಿಕೆ ಕಳೆದುಕೊಂಡಾಗ ಸಂಬಂಧಗಳು
ಆಪ್ತವೆನಿಸುವುದು ಏಕಾಂಗಿತನ
ಕಂಡಾಗ ಕೂಡಿ ಕಳೆವ ಲೆಕ್ಕದ ಪ್ರೀತಿಯ
ನಿರ್ಲೀಪ್ತವಾಗುವುದು ಮನ
ಬಂಧಿಸತೊಡಗಿದಾಗ ಬಾಳಬಂಧನಗಳು
ಕಳಚಬೇಕೆನಿಸುವುದು ವ್ಯಾಮೋಹ
ಹುಸಿಯಾದಾಗ ಬಯಸಿದ ನಿರೀಕ್ಷೆಗಳು
ನೀರಸವೆನಿಸುವುದು ಜೀವನ
ವ್ಯರ್ಥವೆನಿಸಿದಾಗ ಅಪಾತ್ರ ದಾನ
ಬಯಸಬಾರದೆನಿಸುವುದು ಪ್ರತಿಫಲವನ್ನ ಬದುಕುವಾಗ ಗೋಸುಂಬೆಯಂಥವರ ನಡುವೆ
ಸಂಕೀರ್ಣವೆನಿಸುವುದು ಬದುಕು
ದೂರಸರಿದಾಗ ನನ್ನವರಂದು ತಿಳಿದವರೇ
ತಪ್ಪೆನಿಸುವುದು ಹಾಗೆ ಭ್ರಮಿಸಿದ್ದು

ಅರಿತು ಗಟ್ಟೆಯಾಗುವಲ್ಲಿ
ಬದುಕಿನ ಹೋರಾಟದ ಉತ್ಕಟ ಕ್ಷಣಗಳಲಿ
ನನಗೆ ನಾನೇ ಎಂಬುದನು
ಕೈ ಜಾರಿಹೋಗಿ ನಿಂತಿದೆ ಬದುಕಿನ ಬಹುಪಾಲು

****************

.

Leave a Reply

Back To Top