ಕವಿತೆ
ಹಗೆಯಾಗಿದೆ ಹಗಲು
ಪ್ರೊ ವಿಜಯ ಪುಟ್ಟಿ
ಪಯಣ ಶುರುವಾಗಿದೆ
ಕಿರುಬೆರಳ ಹಿಡಿದು
ಮುಂದಡಿ ಇಡುವ ಆಸೆ
ಹರಡಿದೆ ನೂರಾರು ಕನಸು
ಬಿಚ್ಚತೊಡಗಿವೆ
ನಿಧಾನವಾಗಿ
ನನ್ನ ಲೋಕದ
ಭಾವನಾದ್ಭುತ ನೀನು
ಮನಸು ಸಂಯಮ
ಮರೆತುಹೋಗಿದೆ
ಹಗೆಯಾಗಿದೆ ಹಗಲು
ಈ ಜೀವಕೆ
ಬೇರೆ ಬಗೆಯ ಬೇಡ
ನೀ ನನ್ನ ಭಾವಕೆ
ನೀನಿರದ ದಿನ
ಒಮ್ಮೊಮ್ಮೆ ಎದೆಯಲ್ಲಿ
ಬಿರುಗಾಳಿ
ಮೈಮರೆತು ಒಮ್ಮೊಮ್ಮೆ
ವರ್ತಿಸುವ ಮಳ್ಳಿ ನಾ
ಕೋಪವಾ ತುಸು
ನಿವಾಳಿಸಿ
ನನ್ನ ಅಳಿಸದೆ
ಬರಮಾಡಿಕೊ..