ಶಕುಂತಲೆಗೆ

ಕವಿತೆ

ಶಕುಂತಲೆಗೆ

ಓ,,,,ನನ್ನ ಮನಸ
ಕದ್ದವಳೆ,ಚಲುವೆ
ಶಕುಂತಲೆ,,,,,
ಕೈಮುಗಿದು,ಕಾಲ್ಪಿಡಿದು
ಅಂಗಲಾಚಿದರೂ,
ಬಾರದ ನೀನು,
ಯಾವಾಗಲೋ ಒಮ್ಮೆ
“ಧುತ್ತ್”ಎಂದು ಪ್ರತ್ಯಕ಼
ವಾಗುವೆ ಅಪರೂಪಕ್ಕೆ
ಬರುವ ಅಥಿತಿಯಂತೆ.
ಕನಸಲ್ಲಿ,ಕಾಮನಬಿಲ್ಲ
ಸಪ್ತವರ್ಣಗಳ,
ಒಮ್ಮೇಲೆ ಕಾಣಿಸಿ,
ಮನದ ಸ್ತಬ್ದ ತಿಳಿ-
ನೀರಿನಲ್ಲಿ,ಆಸೆಯ
ಅಲೆಗಳನೆಬ್ಬಿಸಿ,
ನನಸಲ್ಲಿ ಹೊಯ್ದಾಡಿಸಿ,
ಕೊರಡ ಕೊನರಿಸಿ,
ಅದರಲ್ಲಿ,ಬಣ್ಣ,ಬಣ್ಣ-
ದ ಹೂ ಅರಳಿಸಿ,
ಬರಡು ಹಯನಾಗುವ
ಆಸೆ ಹುಟ್ಟಿಸುವೆಯೇಕೆ?
ಅರವತ್ತರ ಅರುಳು-
ಮರುಳಿನ ಮನವ
ಮರಳಿ ಅರಳಿಸುವೆ
ಯೇಕೆ ಶಾಕುಂತಲೆ.?
ಬಂದುಬಿಡು ನನ್ನೆಡೆಗೆ,,,
ಖಣ್ವರಾಶ್ರಮ ತೊರೆದು,
ನನ್ನೆದೆಯ ನಂದನವಾಗಿಸು.
ನಾನು ದುಶ್ಶಂತನಂತೆ
ನಿನ್ನ ಅನಾಥೆಯಾಗಿಸು-
ವದಿಲ್ಲ.ಕರುಣೆದೋರು
ನಿತ್ಯ ಕಾಡದಿರು ನನ್ನ.
ಜಾತಿ,ನೀತಿಯ ಬೇಲಿ
ಕಿತ್ತೊಗೆದು ಬಂದುಬಿಡು.
ಅಳಿಯದೇ ಉಳಿದುಬಿಡು
ನನ್ನೊಳಗೆ ಇನ್ನು……!


ಅಬ್ಳಿಹೆಗಡೆ

Leave a Reply

Back To Top