ಹೀಗೊಂದು ಹೋಯ್ದಾಟ

ಕವಿತೆ

ಹೀಗೊಂದು ಹೋಯ್ದಾಟ

ಶಿವಲೀಲಾ ಹುಣಸಗಿ

Shallow Focus Photo of Pink Ceramic Roses

ಕಂಗಳ ತುಂಬ ನಿನ್ನ ಪ್ರತಿಬಿಂಬ
ಎದೆಯ ಮಿಡಿತ ಮೀಟಿದಂತೆಲ್ಲ
ತುಟಿಗಳು ಕಂಪಿಸುತಿದೆ ನಿನಗಾಗಿ
ಮನದೊಳೊಂದು ಬೇಗೆ ಕಾಡಿದಂತೆ

ನನಸಾಗುವ ಕನಸಿಗೆ ಹಾತೋರೆದು
ತನುವು ಮೈ‌ಮನವು ಬೆವರುತಿದೆ
ನಿನ್ನಪ್ಪುಗೆಯಲಿ ಕರುಗುವಾಸೆಗೆ
ನೀಲಿ ಬಾನಿನಲಿ ಬೆಳಗು ಮೂಡಿದಂತೆ

ತಾರೆಗಳ ಬಿಂಕದಲಿ ಬಳುಕುತಲಿ
ನಿನ್ನ ನೋಟದಾಗ್ನಿಯ ಕಾವಿನಲಿ
ಮೋಡಗಳ ತಂಪಿದ್ದರು ಬೆವರಿರುವೆ
ನಿನ್ನತ್ತವಾಲಿದಂತೆಲ್ಲ ಕಂಪನ ಬೆಗೆ

ನಿನ್ನೆದೆಯೊಳಗೆ ಬಚ್ಚಿಡು ಕಾಣದಂತೆ
ಪ್ರೀತಿಗೊಂದು ಹೊಸ ಭಾಷ್ಯ ಬರೆವೆ
ಎದುರುಗೊಳ್ಳುವ ಧಾವಂತೆದೆಯೊಳಗೆ
ಮುಟ್ಟುಗೊಲಾಗಿಸುವಿಯೆಂದೆ

ಬೆವತಿರುವೆ ಪ್ರತಿ ಕನಸಿನಂಚಲಿ
ಈ ಪ್ರೀತಿಯ ಮೊಗ್ಗು ಬೀರಿದಾಗಿಂದ
ಬಿಟ್ಟಿರಲಾರದ ವಿರಹದ ತಾಪಕೆ
ತತ್ತರಿಸಿರುವೆ ನೆನೆದು ಬಿಕ್ಕುತಲಿ

ತುಟಿಗೊಂದು ಮುದ್ರೆಯಿಟ್ಟು
ತನುವ ಸಂತೈಸುವ ನಿನ್ನ ಬಿಂಬ
ಪರಿತಪಿಸುವ ನನ್ನ ತಣಿಸಬಾರದೆ
ಹೀಗೊಂದು ಕನವರಿಕೆ ನಿನಗಾಗಿ

ಕಾಪಿಡು ಜತನದಿ ಕಳೆದು ಹೋದೆನು
ಮೌನದಲಿ ಪ್ರೀತಿಯ ಮಳೆಸುರಿಸು
ತಾಪವು ಕರಗಲಿ ಮಂಜಿನಂತೆಯೆ
ವಿರಹದ ಹೊಯ್ದಾಟದಲಿ ನಿಂದು…


6 thoughts on “ಹೀಗೊಂದು ಹೋಯ್ದಾಟ

  1. ತುಂಬಾ ಸುಂದರ ಸಾಲುಗಳು ಕಣ್ರೀ…. ಮನಸನ್ನು ಮುಟ್ಟವ ಪ್ರೇಮ ಭಾವ..

  2. ಸುಂದರ ಕಲ್ಪನೆ..ಇದ್ದರ ಇಂಥವನಿರಬೇಕು ಪ್ರೇಮ ಹಂಚುವಾಂಗ…ಚೆನ್ನಾಗಿದೆ..ಕವಿತೆ

  3. ಹೃದಯ ತಟ್ಟುವ ಮನದ ಇನಿದನಿ ಅಭಿನಂದನೆಗಳು ಗೆಳತಿ

Leave a Reply

Back To Top