ಅವಕಾಶಗಳು

ಕವಿತೆ

ಅವಕಾಶಗಳು

ಪ್ರೊ.ರಾಜನಂದಾ ಘಾರ್ಗಿ

body of water

ಹಿಂಬಾಲಿಸಿದರೆ ಉರುಳುತ್ತ
ಹಿಡಿದಾಗ ಟಪ್ಪೆಂದು ಒಡೆಯುವ
ಗಾಜಿನ ಗೋಲಗಳಂತೆ
ಈ ಅವಕಾಶಗಳು

ತಗ್ಗಿದ್ದೆಡೆ ಹರಿಯುವ ನೀರಿನಂತೆ
ನುಣುಪಿದ್ದೆಡೆ ಜಾರುವಂತೆ
ಇದ್ದವರನ್ನೆ ಮತ್ತೆ ಸೇರುವವು
ಈ ಅವಕಾಶಗಳು.

ಬಾಯಾರಿದ ಪಯಣಿಗನಿಗೆ
ಆಶೆಯ ಕಿರಣವ ತೊರುತ
ತನ್ನತ್ತ ಸೆಳೆಯುತ
ದೂರ ಸರಿಯುವ
ಮರಿಚಿಕೆಗಳಂತೆ
ಈ ಅವಕಾಶಗಳು

ದಣಿದು ಸೊತು ಹತಾಶರಾಗಿ
ಕತ್ತಲ ಗೂಡು ಸೇರಿದಾಗ
ಮೆಲ್ಲನೇ ಕದ ತಟ್ಟುವ
ಅಪರಿಚಿತರಂತೆ
ಈ ಅವಕಾಶಗಳು.

ಮಲಗಿ ಗಾಢ ನಿದ್ರೆಯಲ್ಲಿ
ಸವಿಗನಸು ಸವಿಯುವಾಗ
ಮೆಲ್ಲನೇ ಕೆನ್ನೆ ಸವರಿ
ಮುತ್ತಿಡುವ ನಲ್ಲನಂತೆ
ಈ ಅವಕಾಶಗಳು.


3 thoughts on “ಅವಕಾಶಗಳು

Leave a Reply

Back To Top