ಕವಿತೆ
ಕೋಟೆ
ಡಾ.ನಿರ್ಮಲಾ ಬಟ್ಟಲ
ಅವನೆದೆಯ
ಪ್ರೀತಿಯ ಏಳು
ಸುತ್ತಿನ ಕೋಟೆಯಲಿ
ಪ್ರೇಮದರಸಿ ನಾನು….!
ಕೋಟೆ ಗೆದ್ದವನ ಸಾಹಸಕ್ಕೆ
ಸೋತವಳು ನಾನು…!
ದಿನವು ಒಲವಿನಾಟ
ಕಣ್ಣನೋಟ ಕಾಮಕೂಟ
ಹರೆಯದ ಚೆಲ್ಲಾಟ ಬಳಸಿದಂತೆ
ಹಳಸಿದಂತೆ ಭಾಸವಾಗುತ್ತಿದೆ…!
ಅವನು ಕಟ್ಟಿಸಿದ ಏಳು ತರದ
ಕೋಟೆಯಲ್ಲಿ ಆರು ಜನರಾಗಲೆ
ಪ್ರೇಮ ಖೈದಿಗಳು ನಾನು ಏಳನೆಯವಳು….!
ಅಸಹನಿಯವೆನಿಸುತ್ತಿದೆ ಪ್ರೇಮ
ಉಸಿರುಗಟ್ಟಿಸುತ್ತಿದೆ ಕಾಮ
ಅವನ ಅಧಿಕಾರಶಾಹಿತ್ವಕ್ಕೆ
ಕೋಟೆ ‘ಯಂತೆ’ ನಾನು ಪ್ರತಿಷ್ಠೆ….!
ನಾನಾಗ ಬಯಸುವುದಿಲ್ಲ
ಪ್ರೇಮ ಮಹಲಿನ ಖೈದಿ
ಅವನ ಕಣ್ಗಾವಲಿನಿಂದ ತಪ್ಪಿಸಿಕೊಂಡು
ಬಾಹು ಬಂಧನವ ಬಿಡಿಸಿಕೊಂಡು
ಹಾರಬೇಕಿದೆ ಈ
ಏಳುಸುತ್ತಿನ ಕೋಟೆ
ಏಳು ಬೀಳುಗಳೆನೆ ಬರಲಿ
ಹಾರಬೇಕು ಬಾನಂಗಳಕೆ
ಹಕ್ಕಿಯಂತೆ….!!
******************
Good narrative. Symbol of unhealthy dominance
A successful poem portraied inner painful thoughts.