ಕವಿತೆ
ವ್ಯಾನಿಟಿ ಬ್ಯಾಗ
ಶಂಕರಾನಂದ ಹೆಬ್ಬಾಳ
ಇದೊಂದು ಪ್ರಸಾಧನ ಚೀಲ
ಒಳಗೇನಿದೆ…?
ಏನಿಲ್ಲ…?
ಉತ್ತರ ದೇವರೆ ಬಲ್ಲ..!
ಹೇರಬೆಂಡ, ಬಳೆ, ಲಿಪ್ ಸ್ಟಿಕ್
ಹಳೆಯ ಒಂದೆರಡು ಪಿಕ್
ಚಿಲ್ಲರೆ ಪುಡಿಗಾಸು,ಚಾಕ್ಲೇಟ,
ಬಂದ ಆದ ಸಿಮಕಾರ್ಡ,
ಮಗನ ಅಂಗಿಯ ಕಿತ್ತಿದ ಗುಂಡಿಗಳಷ್ಟೆ….!
ಆಳಕ್ಕೆ ಸಾಗುತಲಿ,
ಸಿಕ್ಕಿತೊಂದು,
ಹಳೆಯ ಪೋನ ಡೈರಿ,
ದಿನಸಿ ಅಂಗಡಿ ಬೇಳೆ,ಬೆಲ್ಲ,
ಅಕ್ಕಿಗೋಧಿಯ ಜಮಾ ಖರ್ಚು
ಹಾಲು,ಪೇಪರ್ ಬಿಲ್ಲು,,,,!
ಬರಿ ಇಷ್ಟೆನಾ…?
ರಿಪೇರಿ ಮಾಡಿದ ಮೋಬೈಲ್
ಚಾರ್ಜರ್,
ಕಿತ್ತುಹೋದ ಏರಪೋನ್,
ಎರಡು ರಬ್ಬರ ಬ್ಯಾಂಡ,
ತೂತು ಬಿದ್ದ ಮಾಡಲ್
ಸುಂದರಿಯ ಚಿತ್ರದ ಪರ್ಸ,,,
ನೋಟ ವೈಯಾರ ವೆರಿ ವೆಲ್,
ವರ್ಣನೆ ಸಾಕೆನಿಸಿತು….?
ಮೊಗೆದಷ್ಟು ಆಳ
ಗಣಿಯಲ್ಲಿ ಚಿನ್ನ ಅರಸುವವನಂತೆ
ಹಳೆಯ ಲವ್ ಲೆಟರ್ಗಳು
ಇಂತಿ ನಿನ್ನ ಮರೆಯದ ಗೆಳೆಯ,
ನೋಡಿದರೆ ವಿರಹ,
ಪ್ರೇಮದಾ ಬರಹ,
ಇದು ವಿಧಿಯ ಕೈಬರಹ,,,,
ಅದ್ಬುತ ಲೋಕ ದರ್ಶನ…!
ಒಡವೆ ವಸ್ತುಗಳು ಚೂರುಪಾರು
ಸ್ಕಾರ್ಪ ಕೂಡ ಇತ್ತು,,
ಬಿಂದಿ,ಟ್ಯಾಬ್ಲೆಟ್, ಇನ್ನು ಏನೇನೋ..
ಬಿತ್ತರವು ಸಾಧ್ಯವಿಲ್ಲ..
ವ್ಯಾನಿಟಿ ಬ್ಯಾಗ ಬರಿ
ಚೀಲವಷ್ಟೆ ಅಲ್ಲ,
ಅವಳ ಮನಸ್ಸು ಹಾಗೆ ಅಲ್ಲವೆ..?
**********************
Good *****