ಕವಿತೆಯ ಸಾವು

ಕವಿತೆ

ಕವಿತೆಯ ಸಾವು

ಅಬ್ಳಿ,ಹೆಗಡೆ

ಸಖೀ,,,
ಜೊತೆಗಾತಿ,,,,!
ನೀ,,ಅಳುವಾಗ,
ನಾ,,ನಗುತ್ತಿರುವೆ.
ನಾ,,ಅಳುವಾಗ,
ನೀ,,ನಗುತ್ತಿರುವೆ.
ನಾ ಆತ್ಮರತಿಯಾದರೂ
ನನ್ನ-ನಿನ್ನ ನಡುವೆ-
ಕೊನೆಯಿರದ,
ವಿಲಕ಼ಣ,, ನಂಟು.
ಬಿಡಿಸಲಾಗದ,
ಸುಭದ್ರ ಅಂಟು.
ನಗು-ಅಳುವಿನ ಮಧ್ಯೆ,
ವೈರುದ್ಧದ ಕತ್ತಲಲ್ಲಿ
ಬಚ್ಚಿಟ್ಟುಕಾಯುತ್ತಿವೆ–
ನೂರೆಂಟು ದೇವರು-
ಧರ್ಮ,ಕಟ್ಟುಪಾಡುಗಳು
ನೋಡಲು,–
ಕವಿತೆ ಸಾಯುವದನ್ನು.
ನೋವಿದ್ದರೂ ಮನದಿ,
ಹಚ್ಚಿಬಿಡು ಕತ್ತಲಲ್ಲಿ
ಒಂದು ಸಣ್ಣ ಹಣತೆ,
ಸಾಯುವ ಕ಼ಣವನ್ನು
ಬೆಳಕಲ್ಲಿ ಆಸ್ವಾದಿಸಲು.
ಆನಂದಿಸಲು.

**********

Leave a Reply

Back To Top