ಕವಿತೆ
ಅಪ್ಪನೆಂಬೋ ಆಗಸ
ಯಾಕೊಳ್ಳಿ.ಯ.ಮಾ
ಊರ ದೇವಿಯ ಆವಾಹಣೆ
ಮೈಮೇಲೆ ಬಂದ ದಿನ ಊರ
ಗೌಡರಿಗೆ,.
ಯಜಮಾನರಿಗೆ,ಅಪ್ಪ
‘ಏನರಲೆ ಮಕ್ಕಳ್ರಾ’ ಅಂತಿದ್ದ
ದಿನವೆಲ್ಲಾ ಅವರ ಮುಂದೆ
ಕೈಕಟ್ಟಿ ನಿಲ್ಲುತ್ತಿದ್ದ ಅಪ್ಪನ ,ದೇಹದೊಳಗೆ
ಖಾಯಮ್ಮಾಗಿ ದೇವಿ ಬರಬಾರದೇ
ಅಂದುಕೊಳ್ಳುತ್ತಿದ್ದೆ.
ವಾದ್ಯಗ಼ಳ ಸಾಥು ನಡುವೆ
ರಾಗ ತಗೆದುಹಾಡುತ್ತಿದ್ದ
ಅಪ್ಪ, ಥೇಟ್
ದೇವಲೋಕದ ಗಂಧರರ್ವನಂತೆ
ಕಾಣಿಸುತ್ತಿದ್ದ
ವರುಷವೆಲ್ಲಾ ಜೀತದಾಳಾಗಿ
ದುಡಿವ ಅಪ್ಪ ಮನೆಗೆ ಬಂದೊಡನೆ
ಮೈಮೇಲಿನ ಅರಿವೆ
ಹೊರಗೆ ಕಳೆದು ನೀರಲ್ಲಿ
ತೊಯ್ಯಿಸಿ ಒಳಗೆ ಬರುತ್ತಿದ್ದ
ಆವರೆಗೆ ನಮ್ಮನ್ನು ಮುಟ್ಟಿಸಿ
ಕೊಳ್ಳುತ್ತಿರಲಿಲ್ಲ
ಅರಿವೆ ಕಳೆದ ನಂತರ ನಮ್ಮ
ಅಪ್ಪ ಅನಿಸುತ್ತಿತ್ತು
ಕಾಣದೂರಿಗೆ ಅಕ್ಷರದ ಬಿಕ್ಷೆ
ಎತ್ತಲು ನನ್ನ ಕಳಿಸಿ ಮಗ
ಸಾಹೆಬನಾಗಿ ಬರುವ
ಕನಸು ಕಾಣುತ್ತಿದ್ದ ಅಪ್ಪ
ನನ್ನ ವಿದ್ಯೆಯ ಚಂದಾ ಕಟ್ಟಲು
ಕಂಡವರನ್ನೆಲ್ಲ ಹಣ
ಕೇಳುತ್ತಿದ್ದುದ
ನೆನಪಾಗಿ ಈಗ ಜೀವ
ಜಲ್ಲೆನ್ನುತ್ತದೆ
ನಾನು ಅಕ್ಷರದ ಅನ್ನ ಕಾಣುವ
ಮೊದಲೇ
ನಮ್ಮನ್ನು ಅನಾಥರನ್ನಾಗಿಸಿ
ಅಪಗಪ
ಕಾಣದೂರಿಗೆ ಪಯಣ ಬೆಳೆಸಿದುದು
ನೆನಪಾಗಿ ಕಣ್ಣು
ಹನಿಯೊಡೆಯುತ್ತವೆ
ಕವಿತೆ ಚೆನ್ನಾಗಿದೆ ಸರ್