ಕವಿತೆ
“ಬರಿಯ ಬಯಲು” ……ನೆನೆದು…..!!
ಯಮುನಾ.ಕಂಬಾರ
ನೀನಿಲ್ಲದ ನಾನು ಏಕಾಂಗಿ
ಹಾಗಂತಾ ,
ಅವ್ವಾ ಇಲ್ಲವೇನಲ್ಲ,
ನಿನ್ನ ಪ್ರೀತಿಗೆ , ನಿನ್ನ ಮಾತುಗಳಿಗೆ
ನಿನ್ನ ಅಪ್ಪುಗೆಗೆ – ನೀನೇ ಸಾಟಿ ..!!
ಬೇರೆ ಯಾರು ತಾನೇ ಕೊಟ್ಟಾರು
ನಿನ್ನ ಜಾಗೆ…??
ಈಗ ನಾ ನೋಡುವ ಬೀದಿ
ಬರಿಯ ದಾರಿ….!!
ಕಾಡು- ಮೇಡು , ಹಳ್ಳ – ಕೊಳ್ಳ
ಗುಡ್ಡ – ಬೆಟ್ಟ, ಮನೆ- ಮಾರು
ಎಲ್ಲಿ ಹುಡುಕಿದರೂ
ನೀ ಬರಿ ಬಯಲು…..!!
ಹಾಗಂತ ನಿನ್ನ ಇರುವು
ಅಲ್ಲಗಳೆಯಲಾಗದು…..!!
ಅದಕ್ಕೆ ‘ನಾನೇ ‘ ಸಾಕ್ಷಿ.
ಈಗ ಮುಗಿದ ಅಧ್ಯಾಯಗಳಲ್ಲಿ
ನಿನ್ನ ನಾ ಹುಡುಕುವುದಾದರೂ ಹೇಗೆ….??
ನಿನ್ನ ತಿಳಿವುದಾದರೂ ಹೇಗೆ….??
ಮಣ್ಣಿನ ಮನೆ ಅಜ್ಜನದ್ದಾಗಿದ್ದರೂ
ಅದರ ‘ರೂಪ ಲಾವಣ್ಯ’ ನೀನೇ
ಹೊಲ ಯಾರದ್ದೋ ಖರೀದಿ ಮಾಡಿದ್ದರೂ
ಅದರ ಮಣ್ಣಿನ ‘ನಿಲುವು ‘ ನೀನೇ
ಅಡುಗೆಯ ಪಾತ್ರೆಗಳು ಅಂಗಡಿಯವುಗಳಾಗಿದ್ದರೂ
ಅವುಗಳ ‘ ಆಯ್ಕೆ ‘ ನೀನೇ
ಲಟ್ಟನಿಗೆ , ಹೋಳಿಗೆ ಮಣೆ
ಕಟ್ಟಿಗೆಯದ್ದಾಗಿದ್ದರೂ
ಅವುಗಳ ‘ಆಕಾರ ‘ ನೀನೇ…!!
ನಿನ್ನಷ್ಟಕ್ಕೇ ನೀ ತೆರಳಿದ್ದರೂ
ಅವ್ವ ನಿನ್ನ ‘ ಅರ್ಧಾಂಗಿನಿ’
ಅವಳು ಅವಳೇ ಆಗಿದ್ದರೂ
ಅವಳ ‘ನೆನಪು’ ನೀನೇ ಅಪ್ಪಾ…..!!
********************************
ಅಪ್ಪನ ಬಗ್ಗೆ ಬರೆದ ಕವಿತೆ ತುಂಬಾ ಚನ್ನಾಗಿದೆ ಅಭಿನಂದನೆಗಳು
ಧನ್ಯವಾದಗಳು ಸರ್
ರೂಪಾ ಲಾವಣ್ಯ , ಮಣ್ಣಿನ ನಿಲುವು ನೀನೆ
ಸುಂದರವಾದ ಸಾಲುಗಳು…
ಸುಂದರ ಕವನ
ಮೇಡಮ್ ಧನ್ಯವಾದಗಳು ರಿ
ತುಂಬಾ ಅರ್ಥಪೂರ್ಣವಾಗಿದೆ ಮೇಡಂ… ಬಯಲಲ್ಲಿ ಆಲಯವ ನೀವು ಹುಡುಕಿದ ಪರಿ….
ಧನ್ಯವಾದಗಳು ರಿ
ಮೇಡಮ್