ಕವಿತೆ
ಭಾವ ಪಯಣ
ಪ್ರೊ ರಾಜನಂದಾ ಘಾರ್ಗಿ
ಪ್ರೇಮವೆಂಬ ಅನುಭಾವ
ಸಂಕೀರ್ಣತೆಯಲ್ಲಿ
ಹುಡಕುತ್ತಿರುವೆ ಆಳವನು
ತರ್ಕದ ಪಾತಾಳಗರಡಿ ಹಿಡಿದು
ತಡಕಾಡುತ್ತಿರುವೆ
ಮನದಾಳದಲ್ಲೆಲ್ಲೊ ಮನೆಮಾಡಿ
ಭಾವ ಲಹರಿ ಹುಟ್ಟಿಸಿ
ಮೈ ಮನಗಳ ಆಳುತ್ತ
ವೈಚಾರಿಕತೆಗೆ ಸವಾಲೆಸೆದು
ವಿಜ್ರಂಭಿಸುವ ಭಾವ
ಕರಗಿ ಕಣ್ಮರೆಯಾದಳು ರಾಧೆ
ಮೀರಾ ಯೋಗಿಣಿ
ಪ್ರೇಮ ಒಂದಾದರೂ
ಭಾವ ಸ್ವರೂಪ ಬೇರೆ
ಕಾಲಕಾಲಕ್ಕೆ ಬದಲಾಗುವ
ಎರಡೇ ಅಕ್ಷರಗಳಲ್ಲಿ
ಬ್ರಹ್ಮಾಂಡ ಅಡಗಿಸಿರುವ
ಸನ್ಮೋಹಕ ಮಾಂತ್ರಿಕ ಶಕ್ತಿ
ಇಳಿದಷ್ಟು ಆಳ ತೋರುವ
ಹಾರಿದಷ್ಟು ಪಸರಿಸುವ
ಕ್ಷಿತಿಜದತ್ತ ಸೆಳದೊಯ್ಯುವ
ಭಾವ ಪಯಣದ ಪರಮಾವಧಿ
ಭಾವ ಪಯಣದಲಿ ಪ್ರೇಮ ದ ಸುಂದರ ವ್ಯಾಖ್ಯಾನ
Beautiful
ಭಾವ ಭಾವನೆಗಳನ್ನು ಅಳೆದಷ್ಟು ಆಳಕ್ಕೆ ಹೋಗುತ್ತೆ
ತುಂಬಾ ಚನ್ನಾಗಿ ಮೂಡಿ ಬಂದಿದೆ,
ಬಹಳ ಸುಂದರವಾಗಿ ಮೂಡಿ ಬಂದಿದೆ
Good narration for meaningful life